► ಪುತ್ತೂರು: ನೇಣುಬಿಗಿದು ಯುವಕ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಪುತ್ತೂರು, ಅ.23. ಇಲ್ಲಿನ ಪೊಲೀಸ್ ಠಾಣಾ ಸಮೀಪದಲ್ಲಿರುವ ಎಸ್‌ಕೆಪಿ ತರಬೇತಿ ಸಂಸ್ಥೆಯ ಮುಖ್ಯಸ್ಥ ಬೊಳುವಾರು ಪ್ರಭಾಕರ ಆಚಾರ್ಯರವರ ಪುತ್ರ ಸುದೇಶ ಕೆ.ಪಿ. ಎಂಬವರು ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರದಂದು ನಡೆದಿದೆ.

ಸುದೇಶ್ ಕುಮಾರ್ ತರಬೇತಿಗೆಂದು ಭಾನುವಾರದಂದು ಹಾಸನಕ್ಕೆ ತೆರಳಿ ಇಂದು ಬೆಳಿಗ್ಗೆ ಮನೆಗೆ ಹಿಂತಿರುಗಿ ಮನೆಯ ಕೊಠಡಿಯಲ್ಲಿ ಮಲಗಿದ್ದರೆನ್ನಲಾಗಿದೆ. ಮಧ್ಯಾಹ್ನ ವೇಳೆ ಅವರ ತಾಯಿ ಊಟ ಮಾಡಲೆಂದು ಹಲವು ಬಾರಿ ಕರೆದರೂ ಅವರು ಬಾಗಿಲು ತೆರೆದಿರಲಿಲ್ಲ. ಇದರಿಂದ ಗಾಬರಿಗೊಂಡ ಅವರ ತಾಯಿ ಮಗಳಿಗೆ ಕರೆ ಮಾಡಿ ಮನೆಗೆ ಬರುವಂತೆ ತಿಳಿಸಿ ಬಳಿಕ ಪಕ್ಕದ ಮನೆಯವರ ಸಹಾಯದಿಂದ ಬಾಗಿಲು ತೆರೆದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.

Also Read  ನ್ಯೂ ಅಕ್ಷರದೇವಿ ಫ್ಯಾನ್ಸಿ ಮತ್ತು ಟೈಲರಿಂಗ್ ಶುಭಾರಂಭ

error: Content is protected !!
Scroll to Top