ಪತಿಯ ಕುತ್ತಿಗೆಯಲ್ಲಿ ಕಾಲಿಟ್ಟು ಹತ್ಯೆಗೈದ ಪತ್ನಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಎ. 13. ಪತ್ನಿಯೇ ಪತಿಯ ಕುತ್ತಿಗೆಯ ಮೇಲೆ ಕಾಲಿಟ್ಟು ಕೊಲೆಗೈದಿರುವ ಘಟನೆ ಜೆ.ಜೆ. ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


ಕೊಲೆಗೈಯಲ್ಪಟ್ಟವರನ್ನು ಓಬಳೇಶ್‌ ಕಾಲೋನಿ ನಿವಾಸಿ ಮೋಹನ್‌ (41) ಎಂದು ಗುರುತಿಸಲಾಗಿದೆ. ಕೊಲೆಗೆ ಸಂಬಂಧಿಸಿ ಪತ್ನಿ ಪದ್ಮಾ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಮೋಹನ್‌ ಮತ್ತು ಪದ್ಮಾ ಬಿಬಿಎಂಪಿ ಕಾರ್ಮಿಕರಾಗಿದ್ದರು. ಮೋಹನ್‌ ಗೆ ಕುಡಿತದ ಚಟವಿದ್ದು, ಜತೆಗೆ ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಇವರನ್ನು ಕುಡಿತದ ಚಟ ಬಿಡಿಸುವ ಪುರ್ನವಸತಿ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಅಲ್ಲಿಂದ ಬಂದ ಮೋಹನ್ ಮತ್ತೆ ಕುಡಿಯಲು ಆರಂಭಿಸಿದ್ದರು. ಅದೇ ವಿಚಾರವಾಗಿ ದಂಪತಿ ನಡುವೆ ಗಲಾಟೆಯಾಗಿದೆ. ಭಾನುವಾರದಂದು ಮಧ್ಯಾಹ್ನ ಮೋಹನ್‌ ಕಂಠಪೂರ್ತಿ ಮದ್ಯ ಸೇವಿಸಿ ಮನೆಗೆ ಬಂದು, ಪತ್ನಿ ಜತೆ ಜಗಳವಾಡಿದ್ದಾನೆ. ಈ ವೇಳೆ ಕುಡಿಯಲು ಹಣ ಕೊಡುವಂತೆ ಪತ್ನಿಗೆ ಒತ್ತಾಯಿಸಿದ್ದನು. ಇದರಿಂದ ಆಕ್ರೋಶಗೊಂಡ ಪತ್ನಿಯು ಹಣ ಕೊಡುವುದಿಲ್ಲ. ಎಳನೀರು ತರುವಂತೆ ಹೇಳಿದ್ದಾರೆ. ಆಗ ಮತ್ತೊಮ್ಮೆ ಇಬ್ಬರ ನಡುವೆ ಜಗಳ ನಡೆದಿತ್ತು. ಅನಂತರ ಭಾನುವಾರ ಮಧ್ಯಾಹ್ನ 3.15ರ ಸುಮಾರಿಗೆ ಮತ್ತೆ ಮೋಹನ್‌ ಪತ್ನಿ ಜತೆ ಅದೇ ವಿಚಾರವಾಗಿ ಜಗಳವಾಡಿದ್ದು, ಹಲ್ಲೆ ನಡೆಸಲು ಬಂದ ಪತಿಯನ್ನು ಪದ್ಮಾ ಪಕ್ಕಕ್ಕೆ ತಳ್ಳಿದ್ದಾಳೆ. ಈ ವೇಳೆ ಕೆಳಗೆ ಬಿದ್ದ ಮೋಹನ್‌ ಕುತ್ತಿಗೆ ಮೇಲೆ ಕಾಲಿಟ್ಟು ತುಳಿದಿದ್ದು, ಅಸ್ವಸ್ಥಗೊಂಡ ಮೋಹನ್‌ನನ್ನು ಆಕೆಯೇ ಸ್ಥಳೀಯರ ನೆರವಿನೊಂದಿಗೆ ಸಮೀಪದ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಜೆ.ಜೆ. ನಗರ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Also Read  ದ್ವಿಚಕ್ರ ವಾಹನ ಕಳವು- ಆರೋಪಿ ಯುವಕನ ಬಂಧನ

 

error: Content is protected !!
Scroll to Top