ಜೈ ಜನ್ಮಭೂಮಿ ರಕ್ಷಣಾ ಪಡೆಯ 4ನೇ ವಾರ್ಷಿಕೋತ್ಸವ

(ನ್ಯೂಸ್ ಕಡಬ) newskadaba.com ಬಳ್ಳಾರಿ, ಎ. 12. ಜಿಲ್ಲೆಯ ಸುಂಡೂರಿನಲ್ಲಿ ನಡೆದ ಜೈ ಜನ್ಮಭೂಮಿ ರಕ್ಷಣಾ ಪಡೆಯ 4ನೇ ವಾರ್ಷಿಕೋತ್ಸವವು ಎ. 11 ರಂದು ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಜೈಜನ್ಮ ಭೂಮಿ ರಕ್ಷಣಾ ಪಡೆಯ ರಾಜ್ಯಾಧ್ಯಕ್ಷರಾದ ಡಾ.ಸೈಯದ್‌ ಅಮೀನ್ ವಹಿಸಿದ್ದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಜೈ ಜನ್ಮಭೂಮಿ ರಕ್ಷಣಾ ಪಡೆಯ ಸ್ಥಾಪಕ ರಾಜ್ಯಾಧ್ಯಕ್ಷರಾದ ಫೈರೋಜ್ ಖಾನ್, ರಾಜ್ಯ ಉಪಾಧ್ಯಕ್ಷ ರಾದ ಸೈಯದ್ ದಾವಣಗೆರೆ, ಜೈ ಜನ್ಮಭೂಮಿ ರಕ್ಷಣಾ ಪಡೆಯ ರಾಜ್ಯ ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ನಾಗರತ್ನ, ಹಾಸನ ಜಿಲ್ಲಾಧ್ಯಕ್ಷರಾದ ರಿಯಾಜ್, ರಾಜ್ಯ ಯುವ ಘಟಕದ ಅಧ್ಯಕ್ಷರಾದ ಅಸ್ಗರ್ ಪಾಶಾ, ರಾಜ್ಯ ಯುವ ಘಟಕದ ಉಪಾಧ್ಯಕ್ಷರಾದ ಜಬಿಖಾನ್ ಬಳ್ಳಾರಿ, ಜಿಲ್ಲಾಧ್ಯಕ್ಷರಾದ ರಾಜುಖಾನ್ ಹಾಗೂ ಮಂಗಳೂರು ಜೈ ಜನ್ಮಭೂಮಿ ರಕ್ಷಣಾ ಪಡೆಯ ಜಿಲ್ಲಾಧ್ಯಕ್ಷರಾದ ಇಕ್ಬಾಲ್ ಪೆರಿಗೇರಿ ಮೊದಲಾದವರು ಉಪಸ್ಥಿತರಿದ್ದರು. ರಾಜ್ಯದ ಎಲ್ಲಾ ಜಿಲ್ಲಾಧ್ಯಕ್ಷರು ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಮಾಜ ಸೇವೆಯಲ್ಲಿ ತೊಡಗಿದ ಗಣ್ಯರನ್ನು ಸನ್ಮಾನಿಸಲಾಯಿತು.

Also Read  ನೀರಿನ ಸೋರಿಕೆ ತಡೆಗಟ್ಟಲು ಶೀಘ್ರದಲ್ಲೇ ಜಾಗೃತದಳ ರಚನೆ     ➤ ಸಿಎಂ ಬೊಮ್ಮಾಯಿ

error: Content is protected !!
Scroll to Top