ಕುಮಾರಧಾರ ನದಿ ತಟದಲ್ಲಿ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ ➤ ನಿಜವಾದ ದೈವಿಕ ಶಕ್ತಿ ಪ್ರಕೃತಿಯ ಮಡಿಲಲ್ಲಿ ಅಡಗಿದೆ: ಸುಬ್ರಹ್ಮಣ್ಯ ಶ್ರೀ

(ನ್ಯೂಸ್ ಕಡಬ) newskadaba.com ಕಡಬ, ಎ.12. ಪ್ರಕೃತಿಯನ್ನೇ ದೇವರು ಎನ್ನುವ ನಂಬಿಕೆಯಿಂದ ಬದುಕು ಕಟ್ಟಿಕೊಂಡ ಜನರು ನಾವು. ಪ್ರಕೃತಿಯನ್ನು ಪೂಜಿಸಿದರೆ ಅದು ನಮ್ಮನ್ನು ರಕ್ಷಣೆ ಮಾಡುತ್ತದೆ. ನಿಜವಾದ ದೈವಿಕ ಶಕ್ತಿ ಪ್ರಕೃತಿಯ ಮಡಿಲಲ್ಲಿ ಅಡಗಿದೆ ಎಂದು ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.

ಅವರು ಕುಮಾರಧಾರ ಪರಿಸರ ಸಂರಕ್ಷಣ ಸಮಿತಿ (ಹೊಸಮಠ-ದೋಳ್ಪಾಡಿ) ಯ ನೇತೃತ್ವದಲ್ಲಿ  ಕೊಂತೂರು ಪೆರಾಬೆಯ  ಕುಮಾರಧಾರ ನದಿ ತಟದ ಉರುಂಬಿಯಲ್ಲಿ  ಆಯೋಜಿಸಲಾಗಿದ್ದ ಶ್ರೀ ಸತ್ಯನಾರಾಯಣ ಪೂಜೆಯ ಪ್ರಯುಕ್ತ ಜರಗಿದ ಪರಿಸರ ಜಾಗೃತಿಯ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಪರಿಸರವನ್ನು ಸಂರಕ್ಷಣೆ ಮಾಡುವ ಹೋರಾಟದ ಭಾಗವಾಗಿ ಈ ಪ್ರದೇಶದಲ್ಲಿ ವರ್ಷಂಪ್ರತಿ ನಡೆಯುತ್ತಿರುವ ಸತ್ಯನಾರಾಯಣ ಪೂಜೆಯು ನಿರಂತರವಾಗಿ ಮುಂದುವರಿಯಲಿ. ಪರಿಸರವನ್ನು ಹಾಳುಗಡೆವಿ ನಡೆಸಲು ಉದ್ದೇಶಿಸಿರುವ ಜನವಿರೋಧಿ ಯೋಜನೆಗಳ ವಿರುದ್ಧ ಇದೇ ರೀತಿಯ ಸಂಘಟಿತ ಹೋರಾಟಗಳು ಎಲ್ಲೆಡೆ ನಡೆಯಬೇಕು. ಪರಿಸರದ ಜೀವ ಸಂಕುಲವನ್ನು ಉಳಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವಲ್ಲಿ  ಪ್ರತಿಯೊಬ್ಬರೂ ಸಕ್ರಿಯವಾಗಿ ಕೆಲಸ ಮಾಡಬೇಕು ಎಂದು ಅವರು ಸಲಹೆ ನೀಡಿದರು. ಯುವ ಪೀಳಿಗೆ ಮೊಬೈಲ್ ಸಂಸ್ಕೃತಿಗೆ ಮಾರುಹೋಗಿ ಸಾಮಾಜಿಕ ಜಾಲತಾಣಗಳ ದಾಸರಾಗಿ ತಮ್ಮತನವನ್ನು ಕಳೆದುಕೊಳ್ಳುವ ಭೀತಿ ಎದುರಾಗುತ್ತಿದೆ. ಈ ನಿಟ್ಟಿನಲ್ಲಿ  ಮಕ್ಕಳ ಹೆತ್ತವರು ಮತ್ತು ಯುವ ಸಮುದಾಯ ಜಾಗೃತರಾಗಬೇಕಾದ ಅನಿವಾರ್ಯತೆ ಇದೆ ಎಂದು ಅವರು ಕಿವಿಮಾತು ಹೇಳಿದರು.

Also Read  ರಸ್ತೆ ದಾಟುತ್ತಿದ್ದ ವೇಳೆ ಲಾರಿ ಡಿಕ್ಕಿ ➤ ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು

 

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯ ಎ.ಬಿ.ಮನೋಹರ ರೈ ಅವರು ಮಾತನಾಡಿ ಕೊರೊನಾ ಎನ್ನುವ ಮಹಾಮಾರಿಯು ಇಡೀ ಜಗತ್ತನ್ನೇ ತಲ್ಲಣಗೊಳಿಸಿದ ಸಂದರ್ಭದಲ್ಲಿ ನಮಗೆ ಪ್ರಕೃತಿಯ ಅಗತ್ಯತೆ, ಪರಿಸರ ಸಂರಕ್ಷಣೆಯ ಅನಿವಾರ್ಯತೆ ಅರಿವಿಗೆ ಬಂದಿದೆ. ಪರಿಸರ ಸಂರಕ್ಷಣೆಯ ವಿಚಾರದಲ್ಲಿ ಎಲ್ಲರೂ ಕಟಿಬದ್ಧರಾಗಬೇಕಿದೆ ಎಂದರು. ಕುಮಾರಧಾರ ಪರಿಸರ ಸಂರಕ್ಷಣ ಸಮಿತಿ  ಸಂಘಟನ ಕಾರ್ಯದರ್ಶಿ, ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ  ಶಶಾಂಕ ಗೋಖಲೆ ಶುಭಹಾರೈಸಿದರು. ಸಮಿತಿಯ ಉಪಾಧ್ಯಕ್ಷ ಗೋಪಾಲಕೃಷ್ಣ ಗೌಡ ಇಡ್ಯಡ್ಕ, ಕಾರ್ಯದರ್ಶಿ ಕಿರಣ್ ಗೋಗಟೆ, ಪ್ರಮುಖರಾದ ದಿನಕರ ಹೆಬ್ಬಾರ್, ಮೋನಪ್ಪ ಗೌಡ ನಾಡೋಳಿ, ಯಾದವ ನಾಯಕ್  ಮುಂತಾದವರು ಉಪಸ್ಥಿತರಿದ್ದರು.

ಕುಮಾರಧಾರ ಪರಿಸರ ಸಂರಕ್ಷಣ ಸಮಿತಿಯ ಅಧ್ಯಕ್ಷ ಕರುಣಾಕರ ಗೋಗಟೆ ಸ್ವಾಗತಿಸಿ, ಕಾರ್ಯದರ್ಶಿ ಕಿರಣ್ ಗೋಗಟೆ ವಂದಿಸಿದರು. ಕಾಶೀನಾಥ ಗೋಗಟೆ ನಿರೂಪಿಸಿದರು. ವೇದಮೂರ್ತಿ ಪದ್ಮನಾಭ ಜೋಷಿ ಅವರ ನೇತೃತ್ವದಲ್ಲಿ ಸತ್ಯನಾರಾಯಣ ಪೂಜೆ ಜರಗಿತು.

Also Read  ಯುವಕರು ಮಾದಕ ವ್ಯಸನಿಗಳಾಗಿ ತಮ್ಮ ಯೌವ್ವನವನ್ನು ಬಲಿ ನೀಡುತ್ತಿರುವುದು ಖೇದಕರ - ಬಹು|ಇಬ್ರಾಹಿಂ ಸ‌ಅದಿ ಮಾಣಿ - ಸೂರಿಕುಮೇರು ಸುನ್ನೀ ಸಂಘಟನೆಗಳ ವತಿಯಿಂದ ಮಹ್‌ಳರತುಲ್ ಬದ್ರಿಯಾ ಕಾರ್ಯಕ್ರಮ

ಹೋರಾಟದ ಜೊತೆ ಪೂಜೆ: ಪರಿಸರ ಪರ ಹೋರಾಟಕ್ಕೆ ದೈವಿಕ ಬಲ ಪಡೆಯಲು ವರ್ಷಕೊಮ್ಮೆ ನದಿ ತಟದಲ್ಲಿ  ಸತ್ಯನಾರಾಯಣ ಪೂಜೆ ನಡೆಸುವಂತೆ ಸುಬ್ರಹ್ಮಣ್ಯ ಶ್ರೀಗಳು ನೀಡಿದ ಮಾರ್ಗದರ್ಶನದನ್ವಯ ಕಳೆದ ೧೦ ವರ್ಷಗಳಿಂದ  ಕುಮಾರಾ`Àರ  ಪರಿಸರ ಸಂರಕ್ಷಣ ಸಮಿತಿಯ ನೇತೃತ್ವದಲ್ಲಿ ಉರುಂಬಿಯಲ್ಲಿ ಪೂಜೆ ನಡೆಸಲಾಗುತ್ತಿದೆ. ಕರ್ನಾಟಕ ರಾಜ್ಯ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ,  ಖ್ಯಾತ ಪರಿಸರ ಹೋರಾಟಗಾರ ಅನಂತ ಹೆಗಡೆ ಆಶೀಸರ ಅವರ ಮುತುವರ್ಜಿಯಲ್ಲಿ ಉರುಂಬಿ ಪ್ರದೇಶವನ್ನು  ಜೀವ ವೈವಿಧ್ಯ ತಾಣವೆಂದು ಘೋಷಿಸಲು ಸರಕಾರದ ಮಟ್ಟದಲ್ಲಿ ಈಗಾಗಲೇ ಆರಂಭಿಕ ಕೆಲಸಗಳು ಪೂರ್ಣಗೊಂಡಿವೆ ಎಂದು ಕುಮಾರಧಾರ ಪರಿಸರ ಸಂರಕ್ಷಣ ಸಮಿತಿಯ ಅಧ್ಯಕ್ಷ ಕರುಣಾಕರ ಗೋಗಟೆ ಮಾಹಿತಿ ನೀಡಿದರು.

 

 

 

error: Content is protected !!
Scroll to Top