ಮಂಗಳೂರು: ಬೈಕ್ ಹಾಗೂ ಖಾಸಗಿ ಬಸ್ ನಡುವೆ ಢಿಕ್ಕಿ ➤ ಓರ್ವ ಮೃತ್ಯು, ಇಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಉಳ್ಳಾಲ, ಎ. 09. ತ್ರಿಬಲ್ ರೈಡ್ ನಲ್ಲಿದ್ದ ಯುವಕರ ಬೈಕೊಂದು ಓವರ್ ಟೇಕ್ ಮಾಡುವ ರಭಸದಲ್ಲಿ ಸ್ಕಿಡ್ ಆಗಿ ಎದುರಿನಿಂದ ಬರುತ್ತಿದ್ದ ಖಾಸಗಿ ಬಸ್ಸಿಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಕುತ್ತಾರು ಪದವಿನ ಕೊರಗಜ್ಜನ ಕಟ್ಟೆ ಬಳಿ ನಡೆದಿದೆ.

 

ಮೃತರನ್ನು ಪೊಳಲಿ ಕೊಳತ್ತಮಜಲು ನಿವಾಸಿ ಮಹಮ್ಮದ್ ಶಾಫಿ (20)ಎಂದು ಗುರುತಿಸಲಾಗಿದೆ. ಕುತ್ತಾರು ಆದಿ ಸ್ಥಳ ಕೊರಗಜ್ಜನ ಕಟ್ಟೆಯ ಬಳಿ ಕುತ್ತಾರಿನಿಂದ ಎಲಿಯಾರ್ ಪದವಿಗೆ ಮೂವರನ್ನು ಕುಳ್ಳಿರಿಸಿಕೊಂಡು ಧಾವಿಸುತ್ತಿದ್ದ ಬೈಕ್ ಓವರ್ ಟೇಕ್ ಮಾಡುವ ಭರದಲ್ಲಿ ವಿರುದ್ದ ದಿಕ್ಕಿನಿಂದ ಬರುತ್ತಿದ್ದ ಖಾಸಗಿ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕಿನಲ್ಲಿದ್ದ ಮೂವರು ರಸ್ತೆಗೆಸೆಯಲ್ಪಟ್ಟು ಗಂಭೀರ ಸ್ಥಿತಿಯಲ್ಲಿದ್ದ ಇವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ತಲೆಗೆ ಗಂಭೀರ ಗಾಯಗೊಂಡಿದ್ದ ಸಹಸವಾರ ಮಹಮ್ಮದ್ ಶಾಫಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಈ ಕುರಿತು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಪುತ್ತೂರು: ಯುವತಿಯರಿಗೆ ಕಿರುಕುಳ ಆರೋಪ ➤‌ ದೂರು ದಾಖಲು

error: Content is protected !!
Scroll to Top