ಕೋಟಿ ಗೆದ್ದಿರುವುದಾಗಿ ಸುಳ್ಳು ಹಬ್ಬಿಸಿದ್ದ ಸೆಕ್ಯುರಿಟಿ ಗಾರ್ಡ್ ನಾಪತ್ತೆ ➤ ಕೋಟಿ ಗೆದ್ದಿರುವ ಲಾಟರಿ ಟಿಕೆಟ್ ಸೈಬರ್ ನಲ್ಲಿ ಎಡಿಟ್ ಮಾಡಿ ಯಾಮಾರಿಸಿದ

(ನ್ಯೂಸ್ ಕಡಬ) newskadaba.com ಮಂಗಳೂರು, ಎ. 09. ತೊಕ್ಕೊಟ್ಟು ಜಂಕ್ಷನ್ ನಲ್ಲಿರುವ ಸ್ಮಾರ್ಟ್ ಪ್ಲಾನೆಟ್ ವಸತಿ ಸಂಕೀರ್ಣದಲ್ಲಿ ಮೂರು ವರ್ಷಗಳಿಂದ ವಾಚ್ ಮೆನ್ ಆಗಿ ಕೆಲಸ ಮಾಡುತ್ತಿದ್ದ ಕ್ಯಾಲಿಕಟ್ ಮೂಲದ ಮೊಯ್ದಿನ್ ಕುಟ್ಟಿ ಕೇರಳ ರಾಜ್ಯ ಭಾಗ್ಯಮಿತ್ರ ಲಾಟರಿಯಲ್ಲಿ ಒಂದು ಕೋಟಿ ಬಹುಮಾನ ಗೆದ್ದಿರುವುದು ಸುದ್ದಿ ಸುಳ್ಳು ಎನ್ನುವುದು ತಿಳಿದುಬಂದಿದೆ.

ಈತ ಮಾಧ್ಯಮಗಳ ಮೂಲಕ ಮಿಂಚಲು ಹಾಗೂ ಸಾಲಗಾರರಿಂದ ತಪ್ಪಿಸಿಕೊಳ್ಳಲು ಈ ರೀತಿಯ ನಾಟಕವಾಡಿದ್ದಾನೆ ಎನ್ನುವುದು ಬೆಳಕಿಗೆ ಬಂದಿದೆ. ಈತ ಒಂದು ಕೋಟಿಯ ಲಾಟರಿ ಬಂದಿರುವುದಾಗಿ ನಂಬಿಸಲು ಲಾಟರಿ ಟಿಕೆಟ್ ಅನ್ನು ಸೈಬರ್ ನಲ್ಲಿ ಎಡಿಟ್ ಮಾಡಿಸಿ ಎಲ್ಲರನ್ನೂ ಯಾಮಾರಿಸಿದ್ದಾನೆ. ಈ ವಿಚಾರ ಬಹಿರಂಗವಾಗುತ್ತಿದ್ದಂತೆಯೇ ಸೆಕ್ಯುರಿಟಿ ಗಾರ್ಡ್ ಮೊಯ್ದಿನ್ ಕುಟ್ಟಿ ಯಾರ ಕಣ್ಣಿಗೂ ಬೀಳದೆ ಪರಾರಿಯಾಗಿದ್ದಾನೆ ಎನ್ನಲಾಗಿದೆ.

Also Read  400 ಇಂಜಿನಿಯರ್ ಗಳ ನೇರ ನೇಮಕಕ್ಕೆ ಸರ್ಕಾರದ ತೀರ್ಮಾನ

error: Content is protected !!
Scroll to Top