ನಾಪತ್ತೆಯಾಗಿದ್ದ ಮೊಮ್ಮಗನ ಮೃತದೇಹ ಹಾರಂಗಿ ಹಿನ್ನೀರಿನಲ್ಲಿ ಪತ್ತೆ ➤ ಮೃತದೇಹ ಕಂಡ ಅಜ್ಜಿ ಕುಸಿದುಬಿದ್ದು ಮೃತ್ಯು

(ನ್ಯೂಸ್ ಕಡಬ) newskadaba.com ಮಡಿಕೇರಿ, ಎ. 09. ನಾಪತ್ತೆಯಾಗಿದ್ದ ಮೊಮ್ಮಗನ ಮೃತದೇಹವನ್ನು ಕಂಡು ಆತನ ಅಜ್ಜಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಸೋಮವಾರಪೇಟೆ ತಾಲೂಕಿನ ಹೊಸತೋಟದಲ್ಲಿ ನಡೆದಿದೆ.


ಮೃತನನ್ನು ರಮ್ಲಾನ್ ಎಂಬವರ ಪುತ್ರ ಮುಬಶ್ಶಿರ್ (18) ಎಂದು ಗುರುತಿಸಲಾಗಿದೆ. ಗುರುವಾರ ಬೆಳಗ್ಗೆಯಿಂದ ನಾಪತ್ತೆಯಾಗಿದ್ದ ಈತನ ಮೃತದೇಹವು ಶುಕ್ರವಾರ ಬೆಳಗ್ಗೆ ಸಮೀಪದ ಹಾರಂಗಿ ಹಿನ್ನೀರಿನಲ್ಲಿ ಲಭಿಸಿದೆ. ಮೊಮ್ಮಗನ ಮೃತದೇಹವನ್ನು ಕಂಡ ಅಜ್ಜಿಯು ಸ್ಥಳದಲ್ಲಿಯೇ ಕುಸಿದುಬಿದ್ದು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  LPG ಗ್ರಾಹಕರಿಗೆ ಶಾಕ್ ➤ ಲಾಕ್ ಡೌನ್ ಮಧ್ಯೆ ಸಿಲಿಂಡರ್ ದರ ಹೆಚ್ಚಳ

error: Content is protected !!
Scroll to Top