ಬ್ಯಾಂಕ್ ವ್ಯವಹಾರಗಳಿದ್ದಲ್ಲಿ ಇಂದೇ ಮುಗಿಸಿಕೊಳ್ಳಿ ➤ ನಾಳೆಯಿಂದ ಐದು ದಿನಗಳ ಕಾಲ ಬ್ಯಾಂಕ್ ರಜೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಎ. 09. ವಿವಿಧ ಕಾರಣಗಳಿಂದಾಗಿ ನಾಳೆಯಿಂದ (ಎ. 10) ಸಾಲುಸಾಲು ರಜೆಗಳು ಬರಲಿದ್ದು, ಹೀಗಾಗಿ ಸಾರ್ವಜನಿಕರು ತಮ್ಮ ಬ್ಯಾಂಕ್ ವ್ಯವಹಾರಗಳನ್ನು ಇಂದೇ ಮುಗಿಸಿಕೊಂಡರೆ ಒಳ್ಳೆಯದು. ನಾಳೆಯಿಂದ 5 ದಿನಗಳ ಕಾಲ ಸಾಲು ಸಾಲು ರಜೆಗಳು ಬರಲಿದ್ದು, ಖರ್ಚು ವೆಚ್ಚಗಳಿಗೆ ಹಣ ಡ್ರಾ ಮಾಡುವವರು ಇಂದೇ ಮಾಡಿಕೊಳ್ಳುವುದು ಉತ್ತಮ.

ರಜೆಗಳು ಹೀಗಿವೆ:-
ಎ. 10 ಎರಡನೇ ಶನಿವಾರ, ಎ. 11 ಭಾನುವಾರ, ಎ. 13 ಯುಗಾದಿ, ಎ. 14 ಅಂಬೇಡ್ಕರ್ ಜಯಂತಿ ಪ್ರಯುಕ್ತ ರಜೆ ಇರುತ್ತದೆ. ಎ. 12 ರಂದು ಸೋಮವಾರ ಯುಗಾದಿ ಅಮಾವಾಸ್ಯೆ ಇರುವುದರಿಂದ ಹೆಚ್ಚಿನ ಜನ ಬ್ಯಾಂಕ್ ಹಾಗೂ ಕಚೇರಿ ವ್ಯವಹಾರಕ್ಕೆ ಬರುವುದಿಲ್ಲ. ಹೀಗಾಗಿ ಬ್ಯಾಂಕ್, ಕಚೇರಿಗಳಿಗೆ ಸತತ ರಜೆ ಇರುತ್ತದೆ.

Also Read  ಅಕ್ರಮ ಮೂವರು ಬಾಂಗ್ಲಾ ವಲಸಿಗರ ಬಂಧನ..!

error: Content is protected !!
Scroll to Top