(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಎ. 08. ಮದುವೆಗೆ ಮನೆ ಬಿಟ್ಟು ಬರಲು ಒಪ್ಪದ ಮನೆಗೆ ಪ್ರೇಯಸಿಯ ಮನೆಗೆ ನುಗ್ಗಿದ ಪ್ರಿಯತಮ ಸಿಟ್ಟಿಗೆದ್ದು ಆಕೆಗೆ ಚೂರಿಯಿಂದ ಇರಿದ ಘಟನೆ ಇಲ್ಲಿನ ಲಾಯಿಲ ಎಂಬಲ್ಲಿ ಮಂಗಳವಾರದಂದು ರಾತ್ರಿ ನಡೆದಿದೆ.

ಬಂಧಿತ ಆರೋಪಿಯನ್ನು ಪೂಂಜಾಲಕಟ್ಟೆ ನಿವಾಸಿ ಶಮೀರ್ (22) ಎಂದು ಗುರುತಿಸಲಾಗಿದೆ. ಈತನು ತನ್ನದೇ ಸಮುದಾಯದ ಲಾಯಿಲ ಗ್ರಾಮದ ನಿವಾಸಿ 21 ವರ್ಷದ ಯುವತಿಯನ್ನು 5 ವರ್ಷಗಳಿಂದ ಪ್ರೀತಿಸುತ್ತಿದ್ದು, ಮದುವೆಯಾಗಲು ಮನೆಬಿಟ್ಟು ಬರಲು ಒತ್ತಾಯಿಸುತ್ತಿದ್ದ. ಆದರೆ ಯುವತಿಯು ಮನೆ ಬಿಟ್ಟು ಬರಲು ಒಪ್ಪದೇ ಇದ್ದುದ್ದರಿಂದ ಕೋಪಗೊಂಡ ಶಮೀರ್ ಮಂಗಳವಾರ ರಾತ್ರಿ ಹತ್ತು ಗಂಟೆಯ ಸುಮಾರಿಗೆ ಯುವತಿ ಮನೆಗೆ ನುಗ್ಗಿ ಆಕೆಗೆ ಯುವತಿಯ ಎಡಕೈ, ಬಲಕೈ ಹಾಗೂ ಕುತ್ತಿಗೆಗೆ ಚೂರಿಯಿಂದ ಇರಿದಿದ್ದಾನೆ. ತಕ್ಷಣವೇ ಮನೆಮಂದಿ ಆತನನ್ನು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾರೆ.










