ಸುಬ್ರಹ್ಮಣ್ಯ: ಆನೆ ದಾಳಿಗೆ ಓರ್ವ ಬಲಿಯಾದ ಬೆನ್ನಲ್ಲೇ ಆನೆಗಳ ಹಿಂಡು ಪ್ರತ್ಯಕ್ಷ ➤ ಆತಂಕದಲ್ಲಿ ಸಾರ್ವಜನಿಕರು…!

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಎ. 07. ಸುಬ್ರಹ್ಮಣ್ಯದಿಂದ ಐನಕಿದು ಕಲ್ಮಕಾರು, ಕೊಲ್ಲಮೊಗ್ರು, ಹರಿಹರ ಹಾಗೂ ಬಾಳುಗೋಡು ಭಾಗವನ್ನು ಸಂಪರ್ಕಿಸುವ ಮಲೆಯಾಳ ಐನೆಕಿದು ರಸ್ತೆಯ ಕೆದಿಲ ಎಂಬಲ್ಲಿ 8 ಕಾಡಾನೆಗಳ ಹಿಂಡೊಂದು ಕಾಣಿಸಿಕೊಂಡಿದ್ದು, ಪ್ರಯಾಣಿಕರು ಆತಂಕಕ್ಕೊಳಗಾಗಿದ್ದಾರೆ.

ಬುಧವಾರ ಸಂಜೆಯ ವೇಳೆಗೆ 8 ಆನೆಗಳಿರುವ ಹಿಂಡು ಕಾಣಿಸಿಕೊಂಡಿದ್ದು, ಸಾರ್ವಜನಿಕರಲ್ಲಿ ಭಯ ಹುಟ್ಟಿಸಿವೆ. ಈ ಮಾರ್ಗವು ಕಾಡಿನೊಳಗೆ ಹಾದು ಹೋಗಿದ್ದು ದಾರಿ ಮಧ್ಯೆ ಯಾವುದೇ ಮನೆಗಳಿಲ್ಲ. ಇದೀಗ ಆನೆಗಳ ಉಪಟಳವು ಮಿತಿಮೀರಿದ್ದು, ಇಂದು ಕಲ್ಮಕಾರು ಕಾಡಿನ ದಾರಿಯಲ್ಲಿ ತೆರಳಿದ್ದ ವ್ಯಕ್ತಿಯೋರ್ವನ ಮೇಲೆ ಕಾಡಾನೆ ದಾಳಿ ನಡೆಸಿದ್ದು, ಆತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಘಟನೆ ಮಾಸುವ ಮುನ್ನವೆ ಕಾಡಾನೆಗಳ ಹಿಂಡು ಕಾಣಿಸಿಕೊಂಡಿರುವುದು ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಆದುದರಿಂದ ಈ ರಸ್ತೆಯ ಮೂಲಕ ತೆರಳುವವರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

Also Read  33ಕೆವಿ ಪುತ್ತೂರು - ಕಡಬ ಏಕಮಾರ್ಗದಿಂದ ದ್ವಿಮಾರ್ಗ ಕಾಮಗಾರಿಯ ಹಿನ್ನೆಲೆ ➤ ಜುಲೈ 18, 20 ರಂದು ಕಡಬ, ಸುಬ್ರಹ್ಮಣ್ಯ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

error: Content is protected !!
Scroll to Top