ದ್ವಿಚಕ್ರ ವಾಹನದಲ್ಲಿ ಇವಿಎಂ ಸಾಗಾಟ ➤ ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಚೆನ್ನೈ, ಎ. 07. ದ್ವಿಚಕ್ರ ವಾಹನದಲ್ಲಿ ಇವಿಎಂ ಸಾಗಿಸುತ್ತಿದ್ದ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ ಘಟನೆ ತಮಿಳುನಾಡಿನ ವೇಲಚೇರಿ ಎಂಬಲ್ಲಿ ನಡೆದಿದೆ.


ವ್ಯಕ್ರಿಗಳಿಬ್ಬರು ಇವಿಎಂ ನೊಂದಿಗೆ ಬೈಕ್​ನಲ್ಲಿ ಹೋಗುತ್ತಿದ್ದ ಸಂದರ್ಭ ಸ್ಥಳೀಯರು ಇವರಿಬ್ಬರನ್ನು ಇವಿಎಂ ಸಹಿತ ಪೊಲೀಸರ ವಶಕ್ಕೆ ನೀಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದ ವೀಡಿಯೋ ಕೂಡಾ ವೈರಲ್​ ಆಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ತಮಿಳುನಾಡು ಮುಖ್ಯ ಚುನಾವಣಾಧಿಕಾರಿ, ವಶಪಡಿಸಿಕೊಂಡ ಇವಿಎಂ ಗಳು ಮೀಸಲು ಘಟಕಗಳಾಗಿದ್ದು, ಮಂಗಳವಾರ ಮತದಾನಕ್ಕೆ ಬಳಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ಈ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿಯೂ ಹೇಳಿದ್ದಾರೆ.

Also Read  ಕೊಡಗು: ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ; ಪಿಡಿಓ ಮೇಲೆ ಹಲ್ಲೆ

error: Content is protected !!
Scroll to Top