? ಉಡುಪಿ: ಮನೆಯೆದುರು ನಿಲ್ಲಿಸಲಾಗಿದ್ದ ಬೈಕ್ ಹಾಗೂ ಅಟೋ ರಿಕ್ಷಾಕ್ಕೆ ಬೆಂಕಿ ಹಚ್ಚಿ ದುಷ್ಕರ್ಮಿಗಳು ಪರಾರಿ

(ನ್ಯೂಸ್ ಕಡಬ) newskadaba.com ಉಡುಪಿ, ಎ. 06. ಮನೆಯೆದುರು ನಿಲ್ಲಿಸಲಾಗಿದ್ದ ಬೈಕ್ ಹಾಗೂ ಆಟೋ ರಿಕ್ಷಾಕ್ಕೆ ಬೆಂಕಿ ಹಾಕಿರುವ ಘಟನೆ ಉಡುಪಿಯ ಬಡಗಬೆಟ್ಟು ಎಂಬಲ್ಲಿ ನಡೆದಿದೆ.

ಬಡಗುಬೆಟ್ಟುವಿನ ಎನ್.ಜಿ.ಒ ಕಾಲನಿ ನಿವಾಸಿ ಅಬ್ದುಲ್ ರಶೀದ್ ಎಂಬವರು ತನ್ನ ಬಜಾಜ್ ಆಟೋ ರಿಕ್ಷಾವೊಂದನ್ನು ತನ್ನ ಮನೆಯ ಗೇಟಿನ ಎದುರು ನಿಲ್ಲಿಸಿದ್ದು, ರಾತ್ರಿಯ ಹೊತ್ತಲ್ಲಿ ಯಾರೋ ಕಿಡಿಗೇಡಿಗಳು ಆಟೋ ರಿಕ್ಷಾಕ್ಕೆ ಬೆಂಕಿ ಇಟ್ಟು ಪರಾರಿಯಾಗಿದ್ದಾರೆ. ಘಟನೆಯಲ್ಲಿ ಆಟೋ ರೀಕ್ಷಾ ಸಂಪೂರ್ಣ ಸುಟ್ಟು ಕರಕಲಾಗಿದೆ. ಇನ್ನೊಂದೆಡೆ ಬಡಗುಬೆಟ್ಟು ಬೈಲೂರು ಎಂಬಲ್ಲಿ ಹರೀಶ್ ಕುಮಾರ್ ಭಟ್ ಎಂಬವರು ಬಜಾಜ್ ಡಿಸ್ಕವರಿ ಮೋಟಾರ್ ಬೈಕನ್ನು ಮನೆಯ ಅಂಗಳದಲ್ಲಿ ನಿಲ್ಲಿಸಿದ್ದು, ಇದಕ್ಕೂ ಅಪರಿಚಿತರು ಬೆಂಕಿ ಇಟ್ಟು ಪರಾರಿಯಾಗಿದ್ದಾರೆ. ಹರೀಶ್ ಅವರು ಮನೆಯಿಂದ ಹೊರಗೆ ಬಾರದಂತೆ ಮನೆಯ ಬಾಗಿಲಿನ ಚಿಲಕವನ್ನೂ ಕೂಡಾ ಹೊರಗಿನಿಂದ ಹಾಕಿದ್ದಾರೆ. ಈ ಎರಡೂ ಘಟನೆಯ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ.

Also Read  ಹಾಡುಹಗಲೇ ಅಂಗಡಿಗೆ ನುಗ್ಗಿ ನಗದು ದೋಚಿದ ಪ್ರಕರಣ ➤ 48 ಗಂಟೆಯೊಳಗೆ ಹಣದ ಜೊತೆ ಆರೋಪಿಯ ಬಂಧನ

 

error: Content is protected !!
Scroll to Top