ಶಿರಾಡಿ ಘಾಟ್ ನಲ್ಲಿ ಟ್ರಕ್ ಹಾಗೂ ಟಾಟಾ ಏಸ್ ನಡುವೆ ಢಿಕ್ಕಿ ➤ ಉಪ್ಪಿನಂಗಡಿ ನಿವಾಸಿ ಮೃತ್ಯು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಎ. 05. ಎಳನೀರು ಹೇರಿಕೊಂಡು ಬರುತ್ತಿದ್ದ ಟ್ರಕ್ ಹಾಗೂ ಟಾಟಾ ಏಸ್ ಗಾಡಿ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಶಿರಾಡಿ ಗ್ರಾಮದ ಉದನೆ ಪರವರ ಕೊಟ್ಯ ಎಂಬಲ್ಲಿ ನಡೆದಿದೆ.


ಮೃತರನ್ನು ಬಂಟ್ವಾಳ ತಾಲೂಕು ಕುಕ್ಕಾಜೆ ನಿವಾಸಿ ಹನೀಫ್ (56) ಎಂದು ಗುರುತಿಸಲಾಗಿದೆ. ಎಳನೀರು ಹೇರಿಕೊಂಡು ಬರುತ್ತಿದ್ದ ಟ್ರಕ್ ಹಾಗೂ ಹಾಸನಕ್ಕೆ ಬೀಡಿ ವ್ಯಾಪಾರಕ್ಕಾಗಿ ತೆರಳುತ್ತಿದ್ದ ಟಾಟಾಏಸ್ ಗಾಡಿ ನಡುವೆ ಮುಖಾಮುಖಿ ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ಉಪ್ಪಿನಂಗಡಿಯ ಹನೀಫ್ ಎಂಬವರು ಗಂಭೀರ ಗಾಯಗೊಂಡಿದ್ದು ಇವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಟಾಟಾಏಸ್ ನಲ್ಲಿದ್ದ ರಫೀಕ್ ಮತ್ತು ಕರೀಮ್ ಎಂಬವರಿಗೆ ಗಾಯಗಳಾಗಿದ್ದು ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Also Read  ಎಡನೀರು ಮಠಕ್ಕೆ ಭೇಟಿ ನೀಡಿದ ಪುತ್ತೂರು ತಾ. ಹಿಂಜಾವೇ ಪ್ರಮುಖರು

error: Content is protected !!
Scroll to Top