ಮರಳು ನೀತಿ ಸರಳೀಕರಣಗೊಳಿಸಿ ಸರಕಾರದಿಂದ ಆದೇಶ ► ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್

(ನ್ಯೂಸ್ ಕಡಬ) newskadaba.com ಕಡಬ, ಅ.23. ಕರಾವಳಿ ಜಿಲ್ಲೆಗಳ ಸಿ.ಆರ್.ಝೆಡ್ ಹೊರತುಪಡಿಸಿದ ಪ್ರದೇಶಗಳಲ್ಲಿ ನದಿ ಪಾತ್ರದಲ್ಲಿ ಮರಳು ತೆಗೆಯುವ ನೀತಿಯನ್ನು ಸರಕಾರ ಸರಳಿಕರಿಸಿ ಜಿಲ್ಲಾಧಿಕಾರಿಗೆ ಆದೇಶ ಹೊರಡಿಸಿದೆ ಎಂದು ಕಡಬ ತಹಶೀಲ್ದಾರ ಜಾನ್ ಪ್ರಕಾಶ್ ರೋಡ್ರಿಗಸ್ ತಿಳಿಸಿದ್ದಾರೆ.


ಸಾಂಪ್ರದಾಯಿಕವಾಗಿ ಮರಳು ತೆಗೆಯುವ ವ್ಯಕ್ತಿಗಳನ್ನು ಗುರುತಿಸಲು ಸಂಬಂದಪಟ್ಟವರಿಂದ ಅಗತ್ಯ ದಾಖಲೆಗಳೊಂದಿಗೆ ಅಜರ್ಿಗಳನ್ನು ಸ್ವೀಕರಿಸಿ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಸಾಂಪ್ರದಾಯಿಕವಾಗಿ ಮರಳು ತೆಗೆಯುವ ವ್ಯಕ್ತಿಗಳು ಸ್ಥಳಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 10 ವರ್ಷದಿಂದ ವಾಸವಾಗಿರಬೇಕು. ಈ ಬಗ್ಗೆ ತಹಶೀಲ್ದಾರ ಅವರಿಂದ ದೃಡಿಕರಿಸಬೇಕು. ಸಾಂಪ್ರದಾಯಿಕವಾಗಿ ಮರಳು ತೆಗೆಯುತ್ತಿರುವ ವ್ಯಕ್ತಿಗಳು ಕನಿಷ್ಟ 5 ವರ್ಷಗಳಿಂದ ಮರಳು ತೆಗೆಯುತ್ತಿರುವ ಬಗ್ಗೆ ದಾಖಲೆ ನೀಡುವುದು.

Also Read  ಬಂಟ್ವಾಳ: ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವನೆ ➤ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು..!

ನದಿ ಪಾತ್ರದಲ್ಲಿ ತನ್ನದೆ ಆದ ಮರಳು ದಾಸ್ತಾನು ಪ್ರದೇಶವನ್ನು ಹೊಂದಿರಬೇಕು ಅಥವಾ ನದಿ ಪಾತ್ರದಲ್ಲಿ ದಾಸ್ತಾನು ಪ್ರದೇಶ ಹೊಂದಿರುವವರಿಂದ ಒಪ್ಪಿಗೆ ಪತ್ರ ಪಡೆದಿರುವ ದಾಖಲೆಯನ್ನು ಅಜರ್ಿಯ ಜೊತೆ ಇರಬೇಕು. ಬಳಿಕ ಜಿಲ್ಲಾ ಮರಳು ಸಮಿತಿ ಅನುಮೋದನೆ ಪಡೆಯಬೇಕು. ಬಳಿಕ ನಿಯಮಾನುಸಾರ ಮರಳು ಬ್ಲಾಕ್ಗಳನ್ನು ಟೆಂಡರ್ ಮೂಲಕ ಹರಾಜು ಮಾಡಬೇಕು. ಅಲ್ಲದೆ ಯಾತ್ರಿಕೃತ ಮರಳುಗಾರಿಕೆ ಅವಕಾಶವಿಲ್ಲ ಎನ್ನುವುದು ಆದೇಶದಲ್ಲಿ ಉಲ್ಲೇಖಿಸಲಾಗಿದೆ ಎಂದು ಜಾನ್ ಪ್ರಕಾಶ್ ರೋಡ್ರಿಗಸ್ ತಿಳಿಸಿದರು.

error: Content is protected !!
Scroll to Top