(ನ್ಯೂಸ್ ಕಡಬ) newskadaba.com ಹೈದರಾಬಾದ್, ಎ. 04. ಕಲ್ಲಂಗಡಿ ಹಣ್ಣು ತಿಂದ ಪರಿಣಾಮ ಇಬ್ಬರು ಬಾಲಕರು ಮೃತಪಟ್ಟು, ಮೂವರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ತೆಲಂಗಾಣದ ಪೆದ್ದಪಲ್ಲಿ ಎಂಬಲ್ಲಿ ನಡೆದಿದೆ.
ಮೃತರನ್ನು ದರವೇಣಿ ಸಿವಾನಂದು (12) ಮತ್ತು ಚರಣ್ (10) ಎಂದು ಗುರುತಿಸಲಾಗಿದೆ. ಕುಟುಂಬದ ಇತರ ಸದಸ್ಯರಾದ ಶ್ರೀಶೈಲಂ, ಗುಣವತಿ ಮತ್ತು ಅಜ್ಜಿ ಸರಮ್ಮಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಇದೀಗ ಇಡೀ ಕುಟುಂಬಸ್ಥರ ಸಾವಿಗೆ ಇಲಿ ಕಾರಣವಾಗಿದೆ. ಮನೆಯವರು ಇಲಿಯನ್ನು ಕೊಲ್ಲಲು ಇಲಿ ಪಾಶಾಣವನ್ನು ಮನೆಗೆ ತಂದಿದ್ದು, ಅದನ್ನು ಸಿಂಪಡಿಸಿ ಉಳಿದದ್ದನ್ನು ಒಂದು ಕಪ್ ಬೋರ್ಡ್ನಲ್ಲಿ ಇಟ್ಟಿದ್ದರು. ಇಲಿ ಮನೆಯಲ್ಲೇ ಓಡಾಡಿ ಪಾಶಾಣ ಸೇವಿಸಿ, ಅದೇ ಬಾಯಿಯಲ್ಲಿ ಮನೆಯಲ್ಲಿದ್ದ ಕಲ್ಲಂಗಡಿ ಹಣ್ಣನ್ನು ಸಹ ತಿಂದಿದೆ. ಇದನ್ನು ತಿಳಿಯದ ಮನೆಯವರು ಹಣ್ಣನ್ನು ತಿಂದು ಇಡೀ ಕುಟುಂಬ ಅನಾರೋಗ್ಯಕ್ಕೀಡಾಗಿದೆ. ಇಲಿ ಪಾಶಾನ ಅತೀ ವೇಗವಾಗಿ ಇಡೀ ಕಲ್ಲಂಗಡಿ ಹಣ್ಣನ್ನು ವ್ಯಾಪಿಸಿದೆ.