ಮಂಗಳೂರು: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಪಾರ್ಟ್‌ಮೆಂಟ್ ನಲ್ಲಿ ಬೆಂಕಿ ➤ ತಪ್ಪಿದ ಭಾರೀ ಅನಾಹುತ

(ನ್ಯೂಸ್ ಕಡಬ) newskadaba.com ಮಂಗಳೂರು, ಎ. 04. ಇಲ್ಲಿನ ಸ್ಟಾರ್‌ ರಾಕ್‌ ಅಪಾರ್ಟ್‌ಮೆಂಟ್ ನ ಎರಡನೇ ಮಹಡಿಯ ಫ್ಲ್ಯಾಟ್‌ ನಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಶನಿವಾರ ರಾತ್ರಿ ನಡೆದಿದೆ.

ತಾಂತ್ರಿಕ ದೋಷದಿಂದ ರೆಫ್ರಿಜರೇಟರ್‌ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿರುವುದೇ ಬೆಂಕಿಗೆ ಕಾರಣ ಎಂದು ಶಂಕಿಸಲಾಗಿದೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ಬೆಂಕಿ ಹೊತ್ತಿಕೊಂಡ ಸಂದರ್ಭ ಫ್ಲ್ಯಾಟ್‌ನಲ್ಲಿ ಯಾರೂ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದಂತಾಗಿದೆ. ಅಗ್ನಿ ಕಾಣಿಸಿಕೊಂಡ ಹಿನ್ನೆಲೆ ಇಡೀ ಕಟ್ಟಡದ ವಿದ್ಯುತ್ ನ್ನು ತಾತ್ಕಾಲಿಕವಾಗಿ ಕಡಿತಗೊಳಿಸಿ, ಸುರಕ್ಷತಾ ಕ್ರಮವಾಗಿ ಕಾರ್ಯಾಚರಣೆಯ ಸಂದರ್ಭ ಕಟ್ಟಡದಲ್ಲಿದ್ದವರನ್ನು ಸ್ಥಳಾಂತರಿಸಲಾಗಿತ್ತು.

Also Read  ಈಶ್ವರಮಂಗಲ: ತೋಟದ ಕಣಿವೆಗೆ ಬಿದ್ದ ಕಾಡುಕೋಣ

 

 

error: Content is protected !!