ಪತಿ- ಪತ್ನಿಯ ನಡುವೆ ಕೌಟುಂಬಿಕ ಕಲಹದಲ್ಲಿ ಮನೆಗೆ ಬೆಂಕಿ ಕೊಟ್ಟ ಪತಿರಾಯ ➤ 6 ಮಂದಿ ಸಜೀವ ದಹನ

(ನ್ಯೂಸ್ ಕಡಬ) newskadaba.com ಗೋಣಿಕೊಪ್ಪ, ಎ. 03. ದಂಪತಿಗಳ ನಡುವಿನ ಜಗಳದಿಂದಾಗಿ ಆರು ಮಂದಿ ಸಜೀವ ದಹನವಾದ ಘಟನೆ ಪೊನ್ನಂಪೇಟೆ ತಾಲೂಕಿನ ಕಾನೂರು ಗ್ರಾಮದಲ್ಲಿ ನಡೆದಿದೆ.

ಸಜೀವ ದಹನವಾದವರನ್ನು ಬೇಬಿ, ಸೀತೆ, ವಿಶ್ವಾಸ್, ಪ್ರಾರ್ಥನಾ, ಪ್ರಕಾಶ್ ಎಂದು ಗುರುತಿಸಲಾಗಿದೆ. ಮತ್ತಿಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂಸು ತಿಳಿದು ಬಂದಿದೆ. ಕ್ಷುಲ್ಲಕ ಕಾರಣಕ್ಕೆ ಪತಿ-ಪತ್ನಿಯ ನಡುವೆ ಉಂಟಾದ ಜಗಳದಲ್ಲಿ ಬೇಬಿ ಎಂಬವರ ಪತಿ ಎರವರ ಬೋಜ ಎಂಬಾತನು ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಮೂವರು ಮನೆಯಲ್ಲೇ ಸಜೀವ ದಹನವಾದರೆ ಮತ್ತೆ ಮೂವರು ಮೈಸೂರಿನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ. ಆರೋಪಿಯು ಬೆಂಕಿ ಹಚ್ಚಿ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನಿಗಾಗಿ ಬಲೆ ಬೀಸಿದ್ದಾರೆ.

Also Read  ಕರಾವಳಿಯಲ್ಲಿ 10 ಸಾವಿರದ ಗಡಿ ದಾಟಿದ ಕಿಲ್ಲರ್ ಕೊರೋನಾ

error: Content is protected !!
Scroll to Top