ಮಾವಿನ ಹಣ್ಣು ಕದ್ದರೆಂದು ಆರೋಪಿಸಿ ಇಬ್ಬರು ಅಪ್ರಾಪ್ತ ಬಾಲಕರಿಗೆ ಥಳಿಸಿ, ಬಾಯಿಗೆ ಸಗಣಿ ತುರುಕಿಸಿದ ಕಿರಾತಕರು ➤ ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ತೆಲಂಗಾಣ, ಎ. 02. ಮಾವಿನ ಹಣ್ಣು ಕದ್ದ ಆರೋಪದಲ್ಲಿ ಇಬ್ಬರು ಅಪ್ರಾಪ್ತ ಬಾಲಕರನ್ನು ಕಟ್ಟಿಹಾಕಿ ಕೋಲುಗಳಿಂದ ಥಳಿಸಿ, ಬಲವಂತವಾಗಿ ಸಗಣಿಯನ್ನು ಬಾಯಿಗೆ ತುರುಕಿಸಿದ ಆಘಾತಕಾರಿ ಘಟನೆ ತೆಲಂಗಾಣದ ಮೆಹಬೂಬಾದ್‌ ಜಿಲ್ಲೆಯ ನಲ್ಲಿ ತೋರೂರ್ ಮಂಡಲದ ಹೊರವಲಯದಲ್ಲಿ ನಡೆದಿದೆ.

 

ತೋಟದ ಕಾವಲುಗಾರರರಾದ ಯಾಕೂಬ್ ಮತ್ತು ರಾಮು ಇಬ್ಬರು ಮಕ್ಕಳ ಕೈಗಳನ್ನು ನಿರ್ದಾಕ್ಷಿಣ್ಯವಾಗಿ ಕಟ್ಟಿಹಾಕಿ, ಕಟ್ಟಿಗೆಗಳಿಂದ ಥಳಿಸಿ ಕ್ರೂರವಾಗಿ ವರ್ತಿಸಿದ್ದಾರೆ. ಅಲ್ಲದೇ ದನಗಳ ಸಗಣಿಯನ್ನು ಬಲವಂತವಾಗಿ ಮಕ್ಕಳ ಬಾಯಿಗೆ ತುರುಕಿ ಪೈಶಾಚಿಕ ಕೃತ್ಯವೆಸಗಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಗಾಯಗೊಂಡ ಬಾಲಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೋಷಕರು ನೀಡಿದ ದೂರಿನಾಧಾರದ ಮೇಲೆ ಇಬ್ಬರು ಕಾವಲುಗಾರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕರು ತಾವು ಮಾವಿನಹಣ್ಣನ್ನು ಕದ್ದಿಲ್ಲ, ತಪ್ಪಿಸಿಕೊಂಡಿದ್ದ ತಮ್ಮ ನಾಯಿಯನ್ನು ಹುಡುಕಲು ಮಾತ್ರ ಹಣ್ಣಿನ ತೋಟಕ್ಕೆ ಹೋಗಿದ್ದಾಗಿ ತಿಳಿಸಿದ್ದಾರೆ.

Also Read  ಮಂಗಳೂರು: ಶಾಲೆಯಲ್ಲಿ ಬೆಳೆದ ಸಸಿಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

error: Content is protected !!
Scroll to Top