? ಟ್ಯೂಷನ್ ಗೆ ತೆರಳುತ್ತಿದ್ದ ಹತ್ತನೇ ಬಾಲಕಿಯ ಗುಂಪು ಅತ್ಯಾಚಾರಗೈದು ಬಲವಂತವಾಗಿ ವಿಷ ಕುಡಿಸಿದ ಪಾಪಿಗಳು ➤ ಬಾಲಕಿ ಮೃತ್ಯು, ಓರ್ವನ ಬಂಧನ

(ನ್ಯೂಸ್ ಕಡಬ) newskadaba.com ಉತ್ತರ ಪ್ರದೇಶ, ಎ. 02. ಹತ್ತನೇ ತರಗತಿಯ ವಿದ್ಯಾರ್ಥಿನಿಯೋರ್ವಳು ಟ್ಯೂಷನ್​ಗೆ ತೆರಳುತ್ತಿದ್ದ ವೇಳೆ ಆಕೆಯನ್ನು ಎಳೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಮೀರತ್‌ನ ಸರ್ಧಾನ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ನಾಲ್ವರು ದುಷ್ಟರು ಬಳಿಕ ಆಕೆಗೆ ಬಲವಂತವಾಗಿ ವಿಷ ಕುಡಿಸಿದ್ದು, ತೀವ್ರ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಈ ಕುರಿತು ನಾಲ್ವರು ಆರೋಪಿಗಳ ವಿರುದ್ಧ ಕುಟುಂಬದ ಸದಸ್ಯರು ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ದೂರು ದಾಖಲಿಸಿದ್ದಾರೆ. ಅಲ್ಲದೇ ಪೋಕ್ಸೋ ಕಾಯ್ದೆಯಡಿಯಲ್ಲಿಯೂ ಪ್ರಕರಣ ದಾಖಲಾಗಿದೆ. ತನಿಖೆ ನಡೆಸಿದ ಪೊಲೀಸರು ದಬೀಶ್ ಜರಿಯಮಾಲಾ ಎಂಬಾತನನ್ನು ಬಂಧಿಸಿ ಇತರ ಆರೋಪಿಗಳಿಗೆ ಹುಡುಕಾಟ ಮುಂದುವರಿಸಿದ್ದಾರೆ ಎನ್ನಲಾಗಿದೆ.

Also Read  "ರಾಬರ್ಟ್" ಸಿನಿಮಾ ನಿರ್ಮಾಪಕನ ಕೊಲೆಗೆ ಸಂಚು ಪ್ರಕರಣ ➤ ಪ್ರಮುಖ ಆರೋಪಿಯ ಬಂಧನ

error: Content is protected !!
Scroll to Top