ಮಗಳಿಂದಲೇ ಸ್ವಂತ ಅಪ್ಪನ ಮೇಲೆ ಅತ್ಯಾಚಾರ ಆರೋಪ ➤ ಮಗಳು ಹಾಗೂ ಪತ್ನಿಯ ಹೆಸರು ಬರೆದು ಆತ್ಮಹತ್ಯೆಗೆ ಶರಣಾದ ತಂದೆ

(ನ್ಯೂಸ್ ಕಡಬ) newskadaba.com ಮಡಿಕೇರಿ, ಎ. 02. ಡೆತ್‌ನೋಟ್ ಬರೆದಿಟ್ಟು ವಿಷ ಸೇವಿಸಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮರಗೋಡು ಎಂಬಲ್ಲಿ ನಡೆದಿದೆ.

 

ಆತ್ಮಹತ್ಯೆಗೈದವರನ್ನು ಪುದಿಯೊಕ್ಕಡ ಭರತ್(55) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೂ ಮುನ್ನ ಇವರು ತನ್ನ ಸಾವಿಗೆ ಪತ್ನಿ ಹಾಗೂ ಮಗಳೇ ಕಾರಣ ಎಂದು ಡೆತ್‌ ನೋಟ್​ ಬರೆದಿಟ್ಟಿದ್ದಾರೆ. ಭರತ್ ಪುತ್ರಿ ಮೇಘ, ಸ್ವಂತ ಅಪ್ಪನ ಮೇಲೆಯೇ ಅತ್ಯಾಚಾರದ ಆರೋಪ ಹೊರಿಸಿದ್ದಳು. ಆದರೆ ಈ ಕೇಸ್ ಕೋರ್ಟ್​ನಲ್ಲಿ ನಿಲ್ಲಲಿಲ್ಲ. ವಾದ-ಪ್ರತಿವಾದ ಹಾಗೂ ತನಿಖೆಗಳಾಗಿ ಕೊನೆಗೆ ಭರತ್ ಆರೋಪ ಮುಕ್ತನಾಗಿ ಬಂದಿದ್ದರು. ಇದನ್ನು ಸಹಿಸದ ಪತ್ನಿ ಹಾಗೂ ಪುತ್ರಿ ಸೇರಿಕೊಂಡು ತೀವ್ರ ಮಾನಸಿಕ ಹಿಂಸೆ ನೀಡುತ್ತಿದ್ದರಲ್ಲದೇ ಭರತ್​ನಿಗೆ ಚಿತ್ರಹಿಂಸೆ ನೀಡುತ್ತಿದ್ದರು. ಇದರಿಂದ ಬೇಸತ್ತ ಭರತ್ ಆತ್ಮಹತ್ಯೆ ಮಾಡಿಕೊಂಡಿದ್ದು, ತನ್ನ ಸಾವಿಗೆ ಪತ್ನಿ, ಮಗಳೇ ಕಾರಣ. ದೇಶದಲ್ಲಿ ಅತ್ಯಾಚಾರಕ್ಕೆ ಸಂಬಂಧಿಸಿದ ಕಾನೂನು ಬದಲಾಗಬೇಕು ಎಂದು ಕೂಡಾ ಡೆತ್‌ನೋಟ್‌ನಲ್ಲಿ ಭರತ್ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

Also Read  ಸುಳ್ಯ: ಅಡಿಕೆ ಕದ್ದ ಬಾಲಕನಿಗೆ ಮಾರಣಾಂತಿಕ ಹಲ್ಲೆ ➤ 10 ಮಂದಿಯ ವಿರುದ್ದ ಎಫ್ಐಆರ್ ದಾಖಲು

error: Content is protected !!
Scroll to Top