ಕೇರಳ ವಿಧಾನಸಭಾ ಚುನಾವಣಾ ಹಿನ್ನೆಲೆ ತಲಪಾಡಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ➤ ದಾಖಲೆಗಳಿಲ್ಲದ 20 ಲಕ್ಷ ರೂ. ವಶ

(ನ್ಯೂಸ್ ಕಡಬ) newskadaba.com ಮಂಜೇಶ್ವರ, ಎ. 02. ಬಸ್ ಪ್ರಯಾಣಿಕನೋರ್ವನಿಂದ ದಾಖಲೆಗಳಿಲ್ಲದ ಸುಮಾರು 20 ಲಕ್ಷ ರೂ. ಮೊತ್ತವನ್ನು ವಿಶೇಷ ತಪಾಸಣಾ ತಂಡ ವಶಪಡಿಸಿಕೊಂಡ ಘಟನೆ ಮಂಜೇಶ್ವರದಲ್ಲಿ ನಡೆದಿದೆ.


ಕೇರಳ ವಿಧಾನಸಭಾ ಚುನಾವಣೆಯ ಹಿನ್ನೆಲೆ ತಲಪಾಡಿ ಗಡಿಯ ಚೆಕ್ ಪೋಸ್ಟ್ ಬಳಿ ವಿಶೇಷ ತನಿಖಾ ತಂಡವು ತಪಾಸಣೆ ನಡೆಸುತ್ತಿದ್ದ ವೇಳೆ ಕಾಸರಗೋಡು –ಮಂಗಳೂರು ನಡುವಿನ ಕೆಎಸ್ಆರ್ ಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಆಲಂಪಾಡಿಯ ಮುಹಮ್ಮದ್ ಕುಂಞಿ ಎಂಬಾತನಿಂದ ಸೂಕ್ತ ದಾಖಲೆಗಳಿಲ್ಲದ ಹಣವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಚುನಾವಣಾ ಹಿನ್ನೆಲೆ ಮತದಾರರಿಗೆ ಹಂಚಲು ಹೊರರಾಜ್ಯದಿಂದ ಅಕ್ರಮವಾಗಿ ಹಣ, ಮದ್ಯ ಹಾಗೂ ಇನ್ನಿತರ ವಸ್ತುಗಳು ಕೇರಳಕ್ಕೆ ಸಾಗಾಟ ಮಾಡುವ ಸಾಧ್ಯತೆಯಿರುವುದರಿಂದ ಗಡಿಯಲ್ಲಿ ವಿವಿಧ ಇಲಾಖೆಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ತಪಾಸಣಾ ಕಾರ್ಯ ನಡೆಸುತ್ತಿದೆ.

Also Read  ಕಡಬದ ಯಶೋದಾ ಜನರಲ್ ಸ್ಟೋರ್‌ನಲ್ಲಿ ಬೃಹತ್ ದರಕಡಿತದ ತರಕಾರಿ ಮೇಳ ► ಟೊಮ್ಯಾಟೊ, ಸಾಂಬಾರ್ ಸೌತೆ 05 ರೂ. ಉಳಿದಂತೆ ತರಕಾರಿಗಳಿಗೆ 10 ರೂ.

error: Content is protected !!
Scroll to Top