ದಕ್ಷಿಣ ಕನ್ನಡ ಎಸ್ಪಿ ಲಕ್ಷ್ಮೀ ಪ್ರಸಾದ್ ವರ್ಗಾವಣೆ ➤ ನೂತನ ಎಸ್ಪಿಯಾಗಿ ರಿಷಿಕೇಶ್ ಭಗವಾನ್ ನೇಮಕ

(ನ್ಯೂಸ್ ಕಡಬ) newskadaba.com ಬೆಂಗಳೂರು, ಎ.01. ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀ ಪ್ರಸಾದ್ ರವರನ್ನು ವರ್ಗಾಯಿಸಿರುವ ರಾಜ್ಯ ಸರಕಾರ ನೂತನ ಎಸ್ಪಿಯಾಗಿ ರಿಷಿಕೇಶ್ ಭಗವಾನ್ ಅವರನ್ನು ನೇಮಕಗೊಳಿಸಿ ಆದೇಶ ಹೊರಡಿಸಿದೆ.

ಯಾದಗಿರಿ ಜಿಲ್ಲೆಯಲ್ಲಿ ಎಸ್ಪಿಯಾಗಿದ್ದ ಎಸ್. ರಿಷಿಕೇಶ್ ಭಗವಾನ್ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಎಸ್ಪಿಯಾಗಿ ವರ್ಗಾಯಿಸಲಾಗಿದೆ. ಶಿವಮೊಗ್ಗ ಎಸ್ಪಿಯಾಗಿರುವ ಕೆ.ಎಂ.ಶಾಂತರಾಜು ಅವರನ್ನು ಬೆಂಗಳೂರು ಪೂರ್ವದ ಸಂಚಾರ ವಿಭಾಗ ಡಿಸಿಪಿ ಆಗಿ ವರ್ಗಾಯಿಸಿರುವ ಸರಕಾರವು ದಕ್ಷಿಣ ಕನ್ನಡ ಜಿಲ್ಲೆಯ ಎಸ್ಪಿ ಆಗಿದ್ದ ಬಿ.ಎಂ.ಲಕ್ಷ್ಮೀ ಪ್ರಸಾದ್ ಅವರನ್ನು ಶಿವಮೊಗ್ಗ ಜಿಲ್ಲೆಯ ಎಸ್ಪಿಯಾಗಿ ವರ್ಗಾಯಿಸಿದೆ.

Also Read  Job News | ಕಡಬದಲ್ಲೇ ನಿಮಗಾಗಿ ಕಾಯ್ತಾ ಇದೆ ಹಲವು ಉದ್ಯೋಗಗಳು

 

 

 

error: Content is protected !!
Scroll to Top