ಬೆಳ್ತಂಗಡಿ: ದನಗಳ್ಳರು ಎಂದು ಆರೋಪಿಸಿ ಅಮಾಯಕರ ಮೇಲೆ ಹಲ್ಲೆ ಪ್ರಕರಣ ➤ ಏಳು ಮಂದಿ ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಎ. 01.‌ ಪಿಕಪ್ ವಾಹನವೊಂದರಲ್ಲಿ ಸಂಬಂಧಿಕರ ಮನೆಗೆಂದು ಹೋಗಿ ವಾಪಸಾಗುತ್ತಿದ್ದ ವೇಳೆ ದನ ಕಳ್ಳರೆಂದು ಆರೋಪಿಸಿ ಇಬ್ಬರ ಮೇಲೆ ಮೇಲಂತಬೆಟ್ಟು ಎಂಬಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿ ಏಳು ಮಂದಿ ದುಷ್ಕರ್ಮಿಗಳನ್ನು ಬಂಧಿಸಲಾಗಿದೆ.

ಆರೋಪಿಗಳಾದ ರಾಕೇಶ್ ಭಟ್, ರಾಜೇಶ್ ಭಟ್, ಗುರುಪ್ರಸಾದ್, ಚಿದಾನಂದ ಮತ್ತು ಲೋಕೇಶ್ ಮತ್ತು ಇತರೆ ಇಬ್ಬರನ್ನು ಬಂಧಿಸಲಾಗಿದೆ. ಕುಪ್ಪೆಟ್ಟಿಯ ರಹಿಮಾನ್ ಎಂಬವರು ಬುಧವಾರ ಸಂಜೆ ಬೆಳ್ತಂಗಡಿ ಸಂತೆಕಟ್ಟೆಯಲ್ಲಿ ಪಿಕಪ್ ನ ಬಾಡಿ ಕೆಲಸ ಮಾಡಿಸಲೆಂದು ಹೋಗಿದ್ದು, ಇವರ ಜೊತೆಗೆ ಮುಸ್ತಫಾ ಎಂಬವರು ಕೂಡಾ ಇದ್ದರು. ಪಿಕಪ್ ವಾಹನದ ಕೆಲಸ ಪೂರ್ತಿಯಾಗದ ಹಿನ್ನೆಲೆ ರಹಿಮಾನ್ ರವರು ಸವಣಾಲಿಗೆ ಎಂಬಲ್ಲಿನ ತನ್ನ ಸಂಬಂಧಿಕರ ಮನೆಗೆ ಹೋಗಿ ಊಟ ಮಾಡಿ ವಾಪಸ್ಸು ಬರುತ್ತಿದ್ದರು. ಇದೇ ವೇಳೆ ಸವಣಾಲಿನಲ್ಲಿ ಬೈಕ್ ಹಾಗೂ ಕಾರುಗಳಲ್ಲಿ ಬೆನ್ನಟ್ಟಿದ್ದ ತಂಡವೊಂದು ಪಿಕಪ್ ಮೇಲಂತಬೆಟ್ಟು ತಲುಪುತ್ತಿದ್ದಂತೆಯೇ ದುಷ್ಪರ್ಮಿಗಳು ಪಿಕಪನ್ನು ಅಡ್ಡಗಟ್ಟಿ ನೀವು ದನ ಕಳ್ಳರು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ರಹಿಮಾನ್ ಹಾಗೂ ಮುಸ್ತಫಾ ಮೇಲೆ ರಾಡ್ ಮತ್ತು ಕೋಲಿನಿಂದ ಹಲ್ಲೆ ನಡೆಸಿದ್ದಾರೆ. ದಾಳಿಯಿಂದ ರಹಿಮಾನ್ ರ ಒಂದು ಕಣ್ಣಿಗೆ ಗಾಯವಾಗಿದ್ದು ದೇಹದ ಇತರ ಬಹುತೇಕ ಭಾಗಕ್ಕೆ ಗಾಯವಾಗಿದೆ. ವಿಷಯ ತಿಳಿದು ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಗುಂಪು ಚದುರಿಸಿ ಗಾಯಗೊಂಡ ವ್ಯಕ್ತಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

Also Read  ಸಿಎಂ ರಾಜೀನಾಮೆಗೆ ಆಗ್ರಹಿಸಿ ಜೆಡಿಎಸ್ ನಾಯಕರಿಂದ ಪ್ರತಿಭಟನೆ

error: Content is protected !!
Scroll to Top