ಸುಬ್ರಹ್ಮಣ್ಯ: ಸರಳ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಐದು ನವಜೋಡಿಗಳು

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಮಾ. 31. ಕರ್ನಾಟಕ ಸರ್ಕಾರದ ಯೋಜನೆಯಂತೆ ಕುಕ್ಕೇ ಸುಬ್ರಹ್ಮಣ್ಯದಲ್ಲಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮವು ಬುಧವಾರದಂದು ನಡೆಯಿತು.

ಆದಿಸುಬ್ರಹ್ಮಣ್ಯ ಕಲ್ಯಾಣ ಪಂಟಪದಲ್ಲಿ ನಡೆದ ಈ ವಿವಾಹ ಕಾರ್ಯಕ್ರಮದಲ್ಲಿ 5 ಜೋಡಿಗಳು ಸಪ್ತಪದಿ ತುಳಿದರು. ವಿಶೇಷವಾಗಿ ಗಣಹವನ ನಡೆಸಲಾಯಿತು. ಬಳಿಕ ಪುರೋಹಿತರ ಮಂತ್ರಘೋಷದೊಂದಿಗೆ ಜೋಡಿಗಳ ಧಾರಾ ಕಾರ್ಯಕ್ರಮ ನಡೆಯಿತು. ದೇವಸ್ಥಾನದ ವತಿಯಿಂದ ತಾಳಿ, ಸೀರೆ, ದೋತಿ, ಸ್ಮರಣಿಕೆ ಹಾಗೂ ಪ್ರಸಾದ ನೀಡಿ ಹರಸಲಾಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ ರಾಮ್ ಸುಳ್ಳಿ, ಪಿ.ಜಿ.ಎಸ್.ಎನ್ ಪ್ರಸಾದ್, ಸದಸ್ಯರಾದ ಲೊಕೇಶ್ ಮುಂಡೊಕಜೆ, ವನಜ ವಿ ಭಟ್, ಶೋಭಾ ಗಿರಿಧರ್ ಸ್ಕಂದ, ಮನೋಹರ ರೈ, ಉಪಸ್ಥಿತರಿದ್ದರು. ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪುಪ್ಷಲತಾ, ದೇವಸ್ಥಾನದ ಸಿಬ್ಬಂದಿಗಳು, ದಂಪತಿಗಳ ಪೋಷಕರು, ಬಂಧುಗಳು ಉಪಸ್ಥಿತರಿದ್ದರು.

Also Read  ಆಸ್ಪತ್ರೆಗಳಲ್ಲಿ ಸರದಿ ಸಾಲು, ಅನಗತ್ಯ ಕಾಯುವಿಕೆಗೆ ಬ್ರೇಕ್ !     ➤ ಸಚಿವ ಡಾ.ಕೆ. ಸುಧಾಕರ್

ಈ ಕಾರ್ಯಕ್ರಮದಲ್ಲಿ ಮೈಸೂರಿನ ಕಾರಯ್ಯ ಮತ್ತು ರಶ್ಮಿತಾ ಹಾಗೂ ಮಂಜೇ ಗೌಡ ಮತ್ತು ಭಾಗ್ಯ, ಕಡಬದ ಜಗದೀಶ ಮತ್ತು ಕಮಲ, ಕಾರ್ಕಳದ ಪ್ರದೀಪ್ ಮತ್ತು ಅಶ್ವಿನಿ, ಸೋಮವಾರ ಪೇಟೆಯ ಮೋನಪ್ಪ ಮತ್ತು ಬೆಳ್ಳಾರೆಯ ಶಾಂತಲಾ ಎಂಬೀ ಜೋಡಿಗಳು ಸಪ್ತಪದಿ ತುಳಿದರು.

error: Content is protected !!
Scroll to Top