ಸೆಕ್ಸ್ ಸಿಡಿ ಪ್ರಕರಣಕ್ಕೆ ಬಿಗ್ ಬ್ರೇಕ್ ➤ ಕೊನೆಗೂ ಕೋರ್ಟ್ ಗೆ ಹಾಜರಾದ ಯುವತಿ..‼️➤ ಬಂಧನ ಭೀತಿಯಲ್ಲಿ ಟೆಂಪಲ್ ರನ್ ಆರಂಭಿಸಿದ ಸಿಡಿ ಹೀರೊ ಜಾರಕಿಹೊಳಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ.30. ತೀವ್ರ ಕುತೂಹಲ ಕೆರಳಿಸಿದ್ದ ಸಿಡಿ ಪ್ರಕರಣದ ಸಂತ್ರಸ್ತೆ ಯುವತಿಯು 28 ದಿನಗಳ ಬಳಿಕ ಕೊನೆಗೂ ಮಂಗಳವಾರದಂದು ನ್ಯಾಯಾಧೀಶರ ಮುಂದೆ ಹಾಜರಾಗಿದ್ದಾಳೆ.

ವೀಡಿಯೋ ಬಿಡುಗಡೆಯಾಗಿ 28 ದಿನಗಳ ಬಳಿಕ ಯುವತಿ ತನ್ನ ಹೇಳಿಕೆ ನೀಡುವುದಕ್ಕಾಗಿ ವಿಶೇಷ ಭದ್ರತೆಯಲ್ಲಿ ಕೋರ್ಟ್ ಗೆ ಬಂದಿದ್ದು, ಅಲ್ಲಿ ನ್ಯಾಯಾಧೀಶರು ಮತ್ತು ಟೈಪಿಸ್ಟ್ ಎದುರುಗಡೆ ಯುವತಿಯು ಸೆಕ್ಷನ್ 164 ಅಡಿ ತನ್ನ ಸ್ವಯಂ ಹೇಳಿಕೆಯನ್ನು ನೀಡಿದ್ದಾಳೆ. ತದನಂತರ ಹೇಳಿಕೆ ದಾಖಲಿಸಿಕೊಳ್ಳುವ ಸಲುವಾಗಿ ಯುವತಿಯ ವಕೀಲರು ಎಸ್ಐಟಿ ಅಧಿಕಾರಿಗಳ ವಶಕ್ಕೆ ನೀಡಿದ್ದು, ಇನ್ನೊಂದೆಡೆ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲು ಸಿದ್ಧತೆ ಮಾಡಲಾಗಿದೆ. ಇನ್ನು ಸಿಡಿ ಹೀರೋ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಂಧನ ಭೀತಿಯಲ್ಲಿದ್ದು, ಟೆಂಪಲ್ ರನ್ ಆರಂಭಿಸಿದ್ದಾರೆ.

Also Read  ಹಾಡಹಗಲೇ ಗಾಂಜಾ ಮಾರಾಟ​       ➤ ಆರೋಪಿಗಳು ಅರೆಸ್ಟ್

 

 

error: Content is protected !!
Scroll to Top