ನಾಪೊಕ್ಲು: ಜಮಾಅತ್ ಅಧ್ಯಕ್ಷರ ಹತ್ಯೆ ಪ್ರಕರಣ ➤ ಓರ್ವನ ಬಂಧನ

(ನ್ಯೂಸ್ ಕಡಬ) newskadaba.com ಮಡಿಕೇರಿ, ಮಾ. 30. ನಾಪೋಕ್ಲು ಕೊಟ್ಟಮುಡಿ ಜಮಾಅತ್ ಅಧ್ಯಕ್ಷ ಹಾರೀಸ್ ಎಂಬವರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

 

ಆರೋಪಿಯನ್ನು ಹಮೀದ್ ಎಂದು ಗುರುತಿಸಲಾಗಿದೆ. ಹಾರಿಸ್ ಜೊತೆಯಿದ್ದ ಈತ ಹಣಕಾಸಿನ ವಿಚಾರದಲ್ಲುಂಟಾದ ಮನಸ್ತಾಪದಿಂದ ಹತ್ಯೆ ಮಾಡಿರುವುದಿ ತನಿಖೆಯ ವೇಳೆ ತಿಳಿದುಬಂದಿದೆ. ಹಾರೀಸ್ ಕಳೆದ 20 ವರ್ಷಗಳಿಂದ ಪಿರಿಯಾಪಟ್ಟಣದ ಚೌಡೇನಹಳ್ಳಿಯಲ್ಲಿ ಅಡಿಕೆ ವ್ಯಾಪಾರ ನಡೆಸುತ್ತಿದ್ದು, ಆರೋಪಿ ಹಮೀದ್ ಕೂಡಾ ಇವರೊಂದಿಗೆ ಕೆಲಸಕ್ಕಿದ್ದ. ಇತ್ತೀಚೆಗಷ್ಟೇ ಹಮೀದ್ ಬೇರೆ ಅಡಿಕೆ ವ್ಯಾಪಾರ ಆರಂಭಿಸಿದ್ದು,ಈ ವ್ಯಾಪಾರಕ್ಕೆ ಹಣಕಾಸಿನ ನೆರವನ್ನು ಹಾರಿಸ್ ರವರು ನೀಡಿದ್ದರು. ಇತ್ತೀಚಿನ ದಿನಗಳಲ್ಲಿ ವ್ಯವಹಾರದ ವಿಷಯದಲ್ಲಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಸಾಲವಾಗಿ ಕೊಟ್ಟ ಹಣವನ್ನು ಮರಳಿಸುವಂತೆ ಹಾರಿಸ್ ಕೇಳಿದ್ದರು. ಸೋಮವಾರ ಬೆಳಿಗ್ಗೆ ಕೊಡುವುದಾಗಿ ಕರೆಸಿಕೊಂಡು ಹಾರೀಸ್ ನನ್ನು ಹಮೀದ್ ಬರ್ಬರವಾಗಿ ಹತ್ಯೆ ಮಾಡಿದ್ದ.

Also Read  ಸುಬ್ರಹ್ಮಣ್ಯ ರಕ್ಷಿತಾರಣ್ಯದಲ್ಲಿ ಲಕ್ಷಾಂತರ ರೂ. ಮೌಲ್ಯದ ಮರಗಳ ಕಳ್ಳತನ ? ಮರಗಳ್ಳರ ಜೊತೆ ಅರಣ್ಯಾಧಿಕಾರಿಗಳು ಶಾಮೀಲು..⁉️➤ ತನಿಖಾ ಸ್ಥಳಕ್ಕೆ ಮಾಧ್ಯಮ ಪ್ರತಿನಿಧಿಗಳನ್ನು ತಡೆದ ಸಂಚಾರಿ ದಳದ ಅಧಿಕಾರಿ

 

error: Content is protected !!
Scroll to Top