ಮುಂಬೈಗೆ ಪರಾರಿಯಾಗುತ್ತಿದ್ದ ಅನ್ಯಕೋಮಿನ ಜೋಡಿ- ಪೊಲೀಸ್ ವಶಕ್ಕೆ ➤ ಭಜರಂಗದಳದ ಕಾರ್ಯಕರ್ತರಿಂದ ಯಶಸ್ವಿ ಕಾರ್ಯಾಚರಣೆ

(ನ್ಯೂಸ್ ಕಡಬ) newskadaba.com ಮೂಡಬಿದಿರೆ, ಮಾ. 29. ಮುಂಬೈಗೆ ತೆರಳುತ್ತಿದ್ದ ಅನ್ಯಕೋಮಿನ ಜೋಡಿಯೊಂದನ್ನು ಭಜರಂಗದಳದ ಕಾರ್ಯಕರ್ತರು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಮೂಡುಬಿದಿರೆಯಲ್ಲಿ ನಡೆದಿದೆ.

 

ಅನ್ಯಕೋಮಿನ ಯುವಕನೊಂದಿಗೆ ಹಿಂದೂ ಯುವತಿಯೊಬ್ಬಳು ಗುರುಪುರ ಕೈಕಂಬದಲ್ಲಿ ಮುಂಬೈಗೆ ಹೋಗುವ ಬಸ್ ಹತ್ತಿದ್ದಳು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಭಜರಂಗದಳ ಕಾರ್ಯಕರ್ತರು ಮೂಡುಬಿದಿರೆಯಲ್ಲಿ ಬಸ್ ನ್ನು ತಡೆದು ರಕ್ಷಿಸಿದ್ದಾರೆ ಎನ್ನಲಾಗಿದೆ. ಮುಸ್ಲಿಂ ಯುವಕ ಹಾಗೂ ಹಿಂದೂ ಯುವತಿ ಮಂಗಳೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಮುಂಬೈಗೆ ಪರಾರಿಯಾಗಲು ಬಂದಿದ್ದರು ಎಂದು ತಿಳಿದುಬಂದಿದೆ. ಸದ್ಯ ಇಬ್ಬರೂ ಮೂಡಬಿದಿರೆ ಪೊಲೀಸರ ವಶದಲ್ಲಿದ್ದು, ತನಿಖೆಯ ಬಳಿಕವಷ್ಟೇ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

Also Read  ಕರೋಪಾಡಿ: ಜುಗಾರಿ ಅಡ್ಡೆಗೆ ದಾಳಿ ► ನಾಲ್ವರ ಬಂಧನ, ನಗದು ಸೇರಿದಂತೆ ನಾಲ್ಕು ಬೈಕ್ ವಶಕ್ಕೆ

 

error: Content is protected !!
Scroll to Top