ಇಚಿಲಂಪಾಡಿ: ಜೈನ್ ಮಿಲನ್ ನ ಮಾಸಿಕ ಸಭೆ ➤ ಒಗ್ಗಟ್ಟಿನಿಂದ ಯಶಸ್ಸು ಸಾಧ್ಯ- ಮಹಾವೀರ್ ಜೈನ್

(ನ್ಯೂಸ್ ಕಡಬ) newskadaba.com ಇಚಿಲಂಪಾಡಿ, ಮಾ. 29. ಭಾರತೀಯ ಜೈನ್ ಮಿಲನ್ ವಲಯ-8, ಇಜಿಲಂಪಾಡಿ ಶಾಖೆ ಇದರ ಮಾಸಿಕ ಸಭೆಯು ಜಿನಚಂದ್ರ ಶೆಟ್ಟಿ ಬಾಳ್ತಿಲ ಇವರ ಪ್ರಾಯೋಜಕತ್ವದಲ್ಲಿ ಇಜಿಲಂಪಾಡಿ ಅನಂತನಾಥ ಸ್ವಾಮಿ ಬಸದಿಯ ಸಭಾಭವನದಲ್ಲಿ ಭಾನುವಾರದಂದು ನೆರವೇರಿತು.

ಈ ಸಭೆಯು ಆದಿತ್ಯ ಮತ್ತು ಬಳಗದವರ ಪ್ರಾರ್ಥನೆಯೊಂದಿಗೆ ಆರಂಭಗೊಂಡು, ಮಿಲನ್ ಸ್ಥಾಪಕಾಧ್ಯಕ್ಷರಾದ ವೀರ್ ರವಿರಾಜ್ ಶೆಟ್ಟಿ ರವರು ಸ್ವಾಗತಿಸಿದರು ಹಾಗು ಹಿತೇಶ್ ರವರು ಗತಸಭೆಯ ವರದಿ ವಾಚಿಸಿದರು. ಮಿಲನ್ ಸದಸ್ಯ ಯುವ ಪ್ರತಿಭೆ ಸಮ್ಯಕ್ತ್ ಜೈನ್ ರವರು ಸ್ಫೂರ್ತಿದಾಯಕ ಮಾತುಗಳ ಮೂಲಕ, ಯುವ ಮನಸ್ಸುಗಳಿಗೆ ಪ್ರೇರಣಾ ಕತೆಯನ್ನು ಹೇಳಿದರು. ನಂತರ ಮಿಲನ್ ಸದಸ್ಯರಿಂದ ಗಾಯನ ನಡೆಯಿತು. ಸಮಾಜ ಶಕ್ತಗೊಳ್ಳಲು ಒಮ್ಮತದ ಭಾವನೆಗಳಿರಬೇಕು. ಒಗ್ಗಟ್ಟಿನಿಂದ ಮಾತ್ರ ಯಶಸ್ಸು ಸಾಧ್ಯ ಎಂದು ಮಿಲನ್‌ನ ಅಧ್ಯಕ್ಷರಾದ ಮಹಾವೀರ್ ಜೈನ್ ಹೇಳಿದರು. ಸುವರ್ಣ ಲತಾರವರು ಧನ್ಯವಾದಗೈದ ಸಭೆಯನ್ನು, ಕಾರ್ಯದರ್ಶಿ ಸುರಭಿ ಜಯಕುಮಾರ್ ನಿರೂಪಿಸಿದರು.

Also Read  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಂಗಳೂರು ➤ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ ಆನ್ಲೈನ್ ಅರ್ಜಿ ಆಹ್ವಾನ

error: Content is protected !!
Scroll to Top