ಎಡಮಂಗಲ: ದಲಿತ ಮಹಿಳೆಯ ಮನೆ ದ್ವಂಸ ಮಾಡಿದ ಜಾಗದಲ್ಲೇ ಮತ್ತೆ ಮನೆ ನಿರ್ಮಿಸಿದ ಅಂಬೇಡ್ಕರ್ ರಕ್ಷಣಾ ವೇದಿಕೆ

(ನ್ಯೂಸ್ ಕಡಬ) newskadaba.com ಕಡಬ, ಮಾ. 29. ತಾಲೂಕಿನ ಎಡಮಂಗಲ ಗ್ರಾಮದ ಕಜೆತ್ತಡ್ಕ ನಿವಾಸಿ ಬಾಲಕಿ ಎಂಬ ದಲಿತ ಮಹಿಳೆಯ ಮನೆಯನ್ನು ರವಿ ಶೆಟ್ಟಿ ಎಂಬವರು ದ್ವಂಸ ಮಾಡಿದ್ದು, ಬಾಲಕಿ ಮತ್ತು ಅವರ ಕುಟುಂಬಕ್ಕೆ ವಾಸ ಮಾಡಲು ಮನೆಯಿಲ್ಲದ ಕಾರಣ ಮಾ. 28ರಂದು ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ದ್ವಂಸ ಮಾಡಿದ ಜಾಗದಲ್ಲೇ ಮನೆ ನಿರ್ಮಿಸಿಕೊಡಲಾಗಿದೆ.

ಮನೆ ನಿರ್ಮಾಣಕ್ಕೆ ಸಹಕರಿಸಿದ ಅಂಬೇಡ್ಕರ್ ರಕ್ಷಣಾ ವೇದಿಕೆಯ ನಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆಯವರಿಗೆ ಬಾಲಕಿ ಹಾಗೂ ಕುಟುಂಬದವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಸಂಚಾಲಕರಾದ ಪರಮೇಶ್ವರ ಕೆಮ್ಮಿಂಜೆ ಸುಳ್ಯ ತಾಲೂಕು ಉಪಾಧ್ಯಕ್ಷರಾದ ಮಂಜು ಶಾಂತಿಮೂಲೆ, ಜಬಲೆ ಘಟಕದ ಕಾರ್ಯದರ್ಶಿ ಸುನಿಲ್ ಹಾಗೂ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

Also Read  74ನೇ ಸ್ವಾತಂತ್ರ್ಯ ದಿನಾಚರಣೆ ➤ ಜನತೆಗೆ ಶುಭಾಶಯ ಕೋರಿದ ಸಿಎಂ ಬಿ.ಎಸ್.ಯಡಿಯೂರಪ್ಪ

 

 

error: Content is protected !!
Scroll to Top