ನಾಳೆ ಸೆಕ್ಸ್‌ ಸಿಡಿ ಪ್ರಕರಣಕ್ಕೆ ತಾರ್ಕಿಕ ಅಂತ್ಯ..‼️ ➤ ಈ ಬಗ್ಗೆ ಸಿಡಿ ಲೇಡಿಯ ವಕೀಲರು ಹೇಳಿದ್ದೇನು..⁉️

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ.28. ರಾಜ್ಯ ರಾಜಕೀಯದಲ್ಲಿ ಕ್ಷಣಕ್ಕೊಂದು ತಿರುವು ಪಡೆಯುತ್ತಿರುವ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಅವರ ಸೆಕ್ಸ್ ಸಿಡಿ ಪ್ರಕರಣವು ನಾಳೆ ತಾರ್ಕಿಕ ಅಂತ್ಯ ಕಾಣುವ ಸಾಧ್ಯತೆ ಕಂಡು ಬಂದಿದೆ.

ಈ ಕುರಿತು ಯುವತಿಯ ಪರ ವಕೀಲರಾದ ಜಗದೀಶ್ ಫೇಸ್​ಬುಕ್​ ಲೈವ್ ನಲ್ಲಿ ಹೇಳಿಕೆ ನೀಡಿದ್ದು,‌ ಪೊಲೀಸರು ಹಾಗೂ ತನಿಖಾಧಿಕಾರಿಗಳ ಮೇಲೆ ಆರೋಪಿಯ ಪ್ರಭಾವ ಹೆಚ್ಚಾಗಿದ್ದು, ಈ ಕೇಸ್​​ನಲ್ಲಿ ಸರಿಯಾದ ತನಿಖೆ ಸಾಧ್ಯವಿಲ್ಲ. ಪೊಲೀಸರು ಸಂಪೂರ್ಣವಾಗಿ ತನಿಖೆಯ ದಿಕ್ಕು ತಪ್ಪಿಸಿದ್ದಾರೆ. ಆದ್ದರಿಂದ ಇದಕ್ಕೆ ತಾರ್ಕಿಕ ಅಂತ್ಯ ಸಿಗಬೇಕೆಂದರೆ ಯುವತಿಯು ಕೋರ್ಟ್​ ಮುಂದೆ ಹಾಜರಾಗಬೇಕಾಗಿದೆ. ನ್ಯಾಯಾಧೀಶರು ಅನುಮತಿ ನೀಡಿದರೆ ನಾಳೆ ಯುವತಿಯನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗುವುದು ಎಂದು ಹೇಳಿದ್ದಾರೆ.

Also Read  ಕೆಎಂಎಫ್ ಅಧ್ಯಕ್ಷರಾಗಿ ಭೀಮಾ ನಾಯ್ಕ್ ಅವಿರೋಧ ಆಯ್ಕೆ

 

 

error: Content is protected !!
Scroll to Top