ಸಿಡಿ ಪ್ರಕರಣ ➤ ಜಾರಕಿಹೊಳಿ ಮೊಬೈಲ್ ಜಪ್ತಿ ಮಾಡಿದ ಎಸ್ಐಟಿ ಅಧಿಕಾರಿಗಳು

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ. 27. ಸೆಕ್ಸ್ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ರಮೇಶ್ ಜಾರಕಿಹೊಳಿ ಯುವತಿಗೆ ಕರೆ ಮಾಡಿದ್ದರಾ ಅಥವಾ ಆಕೆಯೇ ಇವರಿಗೆ ಕರೆ ಮಾಡಿದ್ಳಾ ಎಂಬುವುದರ ಸತ್ಯಾನ್ವೇಷಣೆಗೆ ಎಸ್‌ಐಟಿ ಅಧಿಕಾರಿಗಳು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಮೊಬೈಲ್ ನ್ನು ವಶಕ್ಕೆ ಪಡೆದಿದ್ದಾರೆ.


ರಮೇಶ್ ರವರೇ ಸ್ವತಃ ಯುವತಿಗೆ ಕರೆ ಮಾಡಿರುವ ಕುರಿತು ಮಾಹಿತಿಯನ್ನು ಎಸ್‌ಐಟಿ ಅಧಿಕಾರಿಗಳು ಸಂಗ್ರಹಿಸುತ್ತಿದೆ. ಈ ಸಿಡಿಗೆ ಸಂಬಂಧಿಸಿ ರಮೇಶ್ ಜಾರಕಿಹೊಳಿಯನ್ನು ವಿಶೇಷ ತನಿಖಾಧಿಕಾರಿಗಳು ಎರಡು ಬಾರಿ ವಿಚಾರಣೆ ನಡೆಸಿದ್ದು, ಈ ವೇಳೆ ಅದೊಂದು ನಕಲಿ ಸಿಡಿ, ನನ್ನನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ಹೂಡಿದ್ದಾರೆ ಎಂದು ರಮೇಶ್ ಅಧಿಕಾರಿಗಳಿಗೆ ತಿಳಿಸಿದ್ದರು.

Also Read  ದ.ಕ. ಜಿಲ್ಲೆಯಲ್ಲಿ ಇಳಿಮುಖದತ್ತ ಕೋವಿಡ್ -19 ಕೇಸ್

 

error: Content is protected !!
Scroll to Top