(ನ್ಯೂಸ್ ಕಡಬ) newskadaba.com ಅಮರಾವತಿ, ಮಾ. 27. ಲೇಡಿ ಸಿಂಗಂ ಎಂದೇ ಪ್ರಖ್ಯಾತಿ ಹೊಂದಿದ್ದ ಮಹಾರಾಷ್ಟ್ರದ ಹರಿಸಾಲ್ ರೇಂಜ್ ನ ಅರಣ್ಯಾಧಿಕಾರಯೋರ್ವರು ಹರಿಸಾಲ್ ಗ್ರಾಮದಲ್ಲಿರುವ ಹೆಡ್ ಕ್ವಾಟ್ರಸ್ ನಲ್ಲಿ ತಮ್ಮ ಸರ್ವೀಸ್ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ದೀಪಾಲಿ ಚೌಹಾನ್ ಮೊಹೈತ್ ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೂ ಮುನ್ನ ಇವರು ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ಭಾರತೀಯ ಅರಣ್ಯಾಧಿಕಾರಿ (ಐಎಫ್ಎಸ್) ವಿನೋದ್ ಶಿವಕುಮಾರ್ ಎಂಬಾತನ ಕಿರುಕುಳದಿಂದಾಗಿ ತಾನು ಆತ್ಮಹತ್ಯೆ ಮಾಡುವುದಾಗಿ ತಿಳಿಸಿದ್ದಾರೆ. ಅಲ್ಲದೇ ಶಿವಕುಮಾರ್ ಕಿರುಕುಳದಿಂದ ತಾನು ಮೊದಲು ಗರ್ಭಪಾತಕ್ಕೆ ಒಳಗಾಗಿದ್ದೆ ಎಂದು ಆತ್ಮಹತ್ಯೆ ಪತ್ರದಲ್ಲಿ ಆರೋಪಿಸಲಾಗಿದೆ. ದೀಪಾಲಿ ಆತ್ಮಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಶಿವಕುಮಾರ್ ಪರಾಟ್ವಾಡಾಗೆ ತೆರಳಿ, ಅಲ್ಲಿ ತಮ್ಮ ಕಾರನ್ನು ಬಿಟ್ಟು, ಬೆಂಗಳೂರಿಗೆ ತೆರಳಲೆಂದು ನಾಗ್ಪುರ ರೈಲ್ವೇ ನಿಲ್ದಾಣದಲ್ಲಿ ಇರುವಾಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ವಿನೋದ್ ಶಿವಕುಮಾರ್ ನನ್ನು ಅಮಾನತು ಮಾಡಲಾಗಿದೆ. ಬಳಿಕ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ದೀಪಾಲಿ ಅವರು ಐದು ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ.