ಸಿಡಿ ಲೇಡಿಯಿಂದ ಮತ್ತೊಂದು ವೀಡಿಯೋ ರಿಲೀಸ್ ➤ ಮತ್ತೆ ಸಂಕಷ್ಟದಲ್ಲಿ ಜಾರಕಿಹೊಳಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ.27. ಜಾರಕೀಹೊಳಿ ಸೆಕ್ಸ್ ಸಿಡಿ ಪ್ರಕರಣವು ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇಂದು ಅಜ್ಞಾತ ಸ್ಥಳದಿಂದ ನಾಲ್ಕನೇ ವಿಡಿಯೋ ಬಿಡುಗಡೆ ಮಾಡಿರುವ ಯುವತಿಯು ನನಗೆ ಬದುಕಬೇಕೋ ಸಾಯಬೇಕೊ ಗೊತ್ತಾಗುತ್ತಿಲ್ಲ, ರಮೇಶ್ ಜಾರಕಿಹೊಳಿ ಅವರ ಹೆಸರು ಬರೆದುಬಿಟ್ಟು ಸಾಯಬೇಕು ಅನಿಸುತ್ತಿದೆ ಎಂದಿದ್ದಾಳೆ.

ಯುವತಿಯು ಶುಕ್ರವಾರದಂದು ಮೂರನೇ ವೀಡಿಯೋ ಬಿಡುಗಡೆ ಮಾಡಿದ್ದ ನಂತರ ಆಕೆಯ ಪರ ವಕೀಲರು ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಿದ್ದರು. ಸಂಜೆ ವೇಳೆಗೆ ಆಕೆಯದ್ದು ಎನ್ನಲಾದ ಆಡಿಯೋವೊಂದು ವೈರಲ್ ಆದ ಬಳಿಕ ಇಂದು ನಾಲ್ಕನೇ ವಿಡಿಯೋ ಬಿಡುಗಡೆಯಾಗಿದೆ. ಆಡಿಯೋದಲ್ಲಿ ಡಿಕೆ ಶಿವಕುಮಾರ್ ಅವರ ಹೆಸರು ಪ್ರಸ್ತಾಪವಾಗಿದ್ದು, ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಇದೀಗ ಅದಕ್ಕೆ ಸಮಜಾಯಿಷಿ ನೀಡುವಂತೆ ಯುವತಿ ಮಾತನಾಡಿದ್ದು, ವಿಡಿಯೋ ಲೀಕ್ ಆದಾಗ ನಾನು ಮಾಧ್ಯಮದ ಮೂಲಕ ಪರಿಚಯವಾಗಿದ್ದ ನರೇಶ್ ಗೆ ಕರೆ ಮಾಡಿ ಮಾತನಾಡಿದ್ದೆ. ನಾನು ಈ ವಿಚಾರದಲ್ಲಿ ಸಣ್ಣವಳಾಗಿದ್ದು, ಸಿಡಿ ವಿಚಾರದಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಬಳಿ ಮಾತನಾಡೋಣ ಎಂದು ನರೇಶ್ ಹೇಳಿದ್ದರು. ಅದಕ್ಕಾಗಿ ನಾನು ಮತ್ತು ನರೇಶ್ ಡಿ.ಕೆ. ಶಿವಕುಮಾರ್ ಭೇಟಿಗೆ ಹೋಗಿದ್ದೆವು. ಆದರೆ ಅವರು ಸಿಗಲಿಲ್ಲ ಎಂದಿದ್ದಾಳೆ.

Also Read  ಅ.1 : ಕೃಷಿಕರಿಗೆ ಬ್ಯಾಂಕ್ ನೊಟೀಸ್ ವಿರೋಽಸಿ ಸವಣೂರಿನಲ್ಲಿ  ಪ್ರತಿಭಟನೆ

 

 

 

error: Content is protected !!
Scroll to Top