ಸೆಕ್ಸ್ ಸಿಡಿ ಪ್ರಕರಣ ಹಿನ್ನೆಲೆ ➤ ಕೊನೆಗೂ ಜಾರಕಿಹೊಳಿ ವಿರುದ್ದ FIR ದಾಖಲು

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ. 26. ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕೊನೆಗೂ ಪ್ರಕರಣ ದಾಖಲಾಗಿದೆ. ಶುಕ್ರವಾರ ಬೆಳಗ್ಗೆ ವಿಡಿಯೋ ಬಿಡುಗಡೆಗೊಳಿಸಿದ್ದ ಸಿಡಿ ಲೇಡಿ, ತಾನಿಂದು ವಕೀಲ ಜಗದೀಶ್ ಗೌಡ ಮೂಲಕ ದೂರು ದಾಖಲಿಸಲಿದ್ದೇನೆ ಎಂದು ಹೇಳಿದ್ದಳು. ಅದರಂತೆ ವಕೀಲ ಜಗದಿಶ್ ಗೌಡ ಅವರು ಕಮಿಷನರ್ ಕಚೇರಿಗೆ ತೆರಳಿ ದೂರು ಸಲ್ಲಿಸಿದ್ದರು. ಇದೀಗ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಲಾಗಿದೆ.


ಐಪಿಸಿ ಸೆಕ್ಷನ್ 376C, 354A, 504, 417, 67A ಐಟಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. CRPC 164 ಅಡಿಯಲ್ಲಿ ಸಂತ್ರಸ್ತೆ ಯುವತಿಯ ಪರವಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದೀಗ ಸಂತ್ರಸ್ತ ಯುವತಿಯು ನೀಡಿದ ದೂರಿನ ಹಿನ್ನೆಲೆಯಲ್ಲಿ FIR ಮೇಲೆ SIT ತನಿಖೆ ನಡೆಸಲಿದೆ ಎಂದು ತಿಳಿದು ಬಂದಿದೆ.

Also Read  ಜಿಂಕೆ ಚರ್ಮ ಮಾರಾಟ ಪ್ರಕರಣ ► ಇಬ್ಬರ ಬಂಧನ

 

error: Content is protected !!
Scroll to Top