ನಾಳೆಯಿಂದ (ಮಾ.27) ಏ. 04ರವರೆಗೆ ಬ್ಯಾಂಕ್ ಗಳು ಬಂದ್

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಮಾ. 26. ಬ್ಯಾಂಕ್ ಗ್ರಾಹಕರು ಬ್ಯಾಂಕ್ ಕೆಲಸವೇನೇ ಇದ್ದರೂ ಇಂದೇ ಮುಗಿಸಿಕೊಳ್ಳುವುದು ಒಳ್ಳೆಯದು. ಇಲ್ಲದಿದ್ದರೆ ಮುಂದಿನ ವಾರದ ಮಂಗಳವಾರದವರೆಗೂ ಕಾಯಬೇಕಾಗುತ್ತದೆ. ನಾಳೆ(ಮಾ.27)ಯಿಂದ ಸತತ ಮೂರು ದಿನಗಳು ಬ್ಯಾಂಕ್‌ ಗಳಿಗೆ ರಜೆ ಇರಲಿವೆ.

 

ಮಾ.27ರಿಂದ ಆರಂಭಗೊಂಡು ಎ. 04 ರವರೆಗೆ ಒಂಭತ್ತು ದಿನಗಳಲ್ಲಿ ಕೇವಲ ಎರಡು ದಿನಗಳು ಮಾತ್ರ ಬ್ಯಾಂಕುಗಳು ತೆರೆದುಕೊಳ್ಳಲಿವೆ. ಬ್ಯಾಂಕ್ ರಜೆಗಳ ವಿವರ:- ಮಾ.27- ಕೊನೆಯ ಶನಿವಾರ, ಮಾ.28- ರವಿವಾರ, ಮಾ.29- ಹೋಳಿ ರಜೆ, ಮಾ.30: ಮಂಗಳವಾರ, ತೆರೆದಿರುತ್ತದೆ, ಮಾ.31- ವರ್ಷಾಂತ್ಯದ ರಜೆ, ಎ.1-ಬ್ಯಾಂಕ್ ಲೆಕ್ಕಗಳ ಮುಕ್ತಾಯದ ದಿನ, ಎ.2- ಗುಡ್ ಫ್ರೈಡೇ, ಎ.3- ಶನಿವಾರ, ತೆರೆದಿರುತ್ತದೆ, ಎ.4: ರವಿವಾರ.

Also Read  ದಟ್ಟ ಮಂಜು, ಶೀತಗಾಳಿ ➤ ರಸ್ತೆ ಹಾಗೂ ರೈಲು ಸಂಚಾರದಲ್ಲಿ ವ್ಯತ್ಯಯ    

 

error: Content is protected !!
Scroll to Top