ಮರಕ್ಕೆ ಢಿಕ್ಕಿ ಹೊಡೆದು ರಸ್ತೆ ಬದಿ ಉರುಳಿ ಬಿದ್ದ ಸೇನಾ ವಾಹನಕ್ಕೆ ಹೊತ್ತಿಕೊಂಡ ಬೆಂಕಿ ➤ ಮೂವರು ಸಜೀವ ದಹನ

(ನ್ಯೂಸ್ ಕಡಬ) newskadaba.com ಜೈಪುರ, ಮಾ. 25. ಭಾರತೀಯ ಸೇನಾ ವಾಹನವೊಂದು ಮಗುಚಿಬಿದ್ದ ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದು, ಪರಿಣಾಮ ಐವರು ಸೈನಿಕರು ಗಂಭೀರ ಗಾಯಗೊಂಡು ಮೂವರು ಸೈನಿಕರು ಸಜೀವ ದಹನವಾದ ಘಟನೆ ರಾಜಸ್ಥಾನದ ಗಂಗಾನಗರ ಜಿಲ್ಲೆಯ ರಜಿಯಾಸರ್ – ಛಾಟರಗಡ ರಸ್ತೆಯ ಗೋಪಾಲ್ಸರದಲ್ಲಿ ಗುರುವಾರ ನಸುಕಿನ ಜಾವ ನಡೆದಿದೆ.


ಬತಿಂಡಾ ಮೂಲದ ಸೇನಾ ಘಟಕದ ಎಂಟು ಸೈನಿಕರು ಸೂರತ್‌ ಗಡದಿಂದ ರಾತ್ರಿ ಪ್ರಯಾಣಿಸುತ್ತಿದ್ದ ವೇಳೆ ಸುಮಾರು 1.30ರ ಸಮಯದಲ್ಲಿ ಇಂದಿರಾ ಗಾಂಧಿ ಕಾಲುವೆಯ ಸಮೀಪ ಜಿಪ್ಸಿ ವಾಹನವು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದು ಮಗುಚಿಬಿದ್ದಿದೆ. ಅಪಘಾತದಲ್ಲಿ ವಾಹನಕ್ಕೆ ಕೂಡಲೇ ಬೆಂಕಿ ಆವರಿಸಿಕೊಂಡಿದ್ದರಿಂದ ಸೈನಿಕರಿಗೆ ತಪ್ಪಿಸಿಕೊಳ್ಳಲಾಗದೇ ಮೂವರು ಯೋಧರು ಸಜೀವ ದಹನವಾಗಿದ್ದಾರೆ.

Also Read  ಯುವತಿಯೊಬ್ಬಳು ಪ್ರಿಯಕರನ ತಂದೆಯೊಂದಿಗೆ ಎಸ್ಕೇಪ್‌..!

error: Content is protected !!
Scroll to Top