ಏ. 08 ರಂದು ಶಂಸುಲ್ ಉಲಮಾ ಮಹಿಳಾ ಶರೀಅತ್ ಕಾಲೇಜು ಕೆಮ್ಮಾರ ಇದರ ಪ್ರಥಮ ಸನದುದಾನ ಹಾಗೂ ಏಕದಿನ ಮತ ಪ್ರಭಾಷಣ

(ನ್ಯೂಸ್ ಕಡಬ) newskadaba.com ಆತೂರು, ಮಾ. 25. ಶಂಸುಲ್ ಉಲಮಾ ಮಹಿಳಾ ಶರೀಅತ್ ಕಾಲೇಜು ಕೆಮ್ಮಾರ, ಇದರ ಪ್ರಥಮ ಸನದುದಾನ ಹಾಗೂ ಏಕದಿನ ಮತ ಪ್ರಭಾಷಣವು ಎಪ್ರಿಲ್ 08 ರಂದು ನಡೆಯಲಿದೆ.

 

 

ಇದರ ಮುಖ್ಯ ಪ್ರಭಾಷಣವನ್ನು ಅದ್ಬುತ ಬಾಲಕ ಖ್ಯಾತ ವಾಗ್ಮಿ ಹಾಗು ವಾಫೀ ಕಾಲೇಜು ವಿದ್ಯಾರ್ಥಿ ಅಲ್-ಹಾಫಿಳ್ ಅಬ್ದುಲ್ ಮುನೀಮ್ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಝೈನುಲ್ ಆಬಿದೀನ್ ತಂಙಳ್ ಬೆಳ್ತಂಗಡಿ, ಮೊಹಮ್ಮದ್ ಜುನೈದ್ ಜಿಫ್ರೀ ತಂಙಳ್ ಆತೂರ್, ಅನಸ್ ತಂಙಳ್ ಕರ್ವೇಲು ಹಾಗೂ ಇನ್ನಿತರ ಸಾದಾತುಗಳು, ಉಲಮಾ ಉಮರಾ ನಾಯಕರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Also Read  ಬಜ್ಪೆ: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಆರ್ಕೊ ಮೈದಾನದಲ್ಲಿ ಕ್ರೀಡಾಕೂಟ

error: Content is protected !!
Scroll to Top