ಪಾಲುದಾರಿಕೆ ವ್ಯವಹಾರದಲ್ಲಿ ಲಾಭಾಂಶ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ

(ನ್ಯೂಸ್ ಕಡಬ) newskadaba.com ಕುಂದಾಪುರ, ಮಾ. 24. ಪಾಲುದಾರಿಕೆ ವ್ಯವಹಾರದಲ್ಲಿ ಲಾಭಾಂಶ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ ಮಾಡಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ.

ಕುಂದಾಪುರದ ತಲ್ಲೂರು ಗ್ರಾಮದ ಕೆಳ ಹಿತ್ಲುವಿನ ನಾಗೇಶ್ ರಾಮ ಚಂದನ್ ಎಂಬವರಿಗೆ ಪ್ರಮೋದ ತಲ್ಲೂರು ಎಂಬವರು ಕರೆ ಮಾಡಿ ತಾನು ಬೆಂಗಳೂರಿನ ನಾಗರಬಾವಿಯ ಸುಷ್ಮಾ ಎಂಬವರೊಂದಿಗೆ ಪಾಲುದಾರಿಕೆಯಲ್ಲಿ ಕಾರು ವ್ಯವಹಾರ ಆರಂಭಿಸಿದ್ದಲ್ಲದೇ ಕಾರು ಮಾರಾಟದ ವ್ಯವಹಾರಕ್ಕೆ ಸಂಬಂಧಿಸಿ ಇದರಲ್ಲಿ ಹಣ ತೊಡಗಿಸಿದರೆ 20 ಶೇಕಡಾ ಲಾಭವನ್ನು ಪಡೆಯಬಹುದಾಗಿದೆ ಎಂದೂ ತಿಳಿಸಿದ್ದಾರೆ. ಇದನ್ನು ನಂಬಿದ ನಾಗೇಶ್ ಅವರು 2019ರ ಮಾ.13 ರಿಂದ ಒಟ್ಟು 29,12,212 ರೂ. ಹಣ ಪಾವತಿಸಿದ್ದಾರೆ. ಆದರೆ ಈವರೆಗೂ ಖಾತೆಗೆ ಹಣ ಜಮೆ ಮಾಡಿಸಿಕೊಂಡವರು ಅದರಲ್ಲಿ ವಾಪಸ್ಸು ನೀಡಬೇಕಾದ 21,38,712 ರೂ ಹಣವನ್ನು ಮರಳಿಸದೇ ವಂಚಿಸಿದ್ದಾರೆ ಎಂದು ನಾಗೇಶ್ ಅವರು ದೂರು ನೀಡಿದ್ದು, ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ನೆಲ್ಯಾಡಿ: ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಟ್ರಾವೆಲ್ಲರ್ ಪಲ್ಟಿ ➤ ಟೆಂಪೋದಲ್ಲಿತ್ತು ಅಕ್ರಮ ದನದ ಮಾಂಸದ ಕಟ್ಟು

error: Content is protected !!
Scroll to Top