ಅಮೇರಿಕಾದ ಸರ್ಜನ್ ಜನರಲ್ ಆಗಿ ಕರ್ನಾಟಕದ ವೈದ್ಯ ವಿವೇಕ್ ಮೂರ್ತಿ ನೇಮಕ

(ನ್ಯೂಸ್ ಕಡಬ) newskadaba.com ವಾಷಿಂಗ್ಟನ್, ಮಾ. 24. ಕೊರೋನಾ ವೈರಸ್ ಮಧ್ಯೆ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ನೀಡಿದ ಆರೋಗ್ಯಾಧಿಕಾರಿಗಳಲ್ಲಿ ಒಬ್ಬರಾಗಿರುವ ಕರ್ನಾಟಕ ಮೂಲದ ವೈದ್ಯ ವಿವೇಕ್ ಮೂರ್ತಿಯವರು ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ರವರ ಸರ್ಜನ್ ಜನರಲ್ ಆಗಿ ಆಯ್ಕೆಯಾಗಿದ್ದಾರೆ ಎಂದು ಯುಎಸ್ ಸೆನೆಟ್ ದೃಢೀಕರಿಸಿದೆ.


ಅಮೇರಿಕದ ನೂತನ ಅಧ್ಯಕ್ಷ ಜೋ ಬೈಡೆನ್ ರವರ ಸರ್ಜನ್ ಜನರಲ್ ಆಯ್ಕೆ ಪ್ರಕ್ರಿಯೆಗೆ ಚುನಾವಣೆ ನಡೆದಿದ್ದು, ಯುಎಸ್ ಸೆನೆಟರ್ ಗಳು 57-43 ಮತ ಚಲಾಯಿಸುವ ಮೂಲಕ ಇಂಡಿಯನ್- ಅಮೆರಿಕನ್ ಆಗಿರುವ ವಿವೇಕ್ ಮೂರ್ತಿಯವರ ಹೆಸರನ್ನು ದೃಢೀಕರಿಸಿದೆ. ಇವರು ಬರಾಕ್ ಒಬಾಮಾರ ಆಡಳಿತದಲ್ಲಿ ಸರ್ಜನ್ ಜನರಲ್ ಆಗಿ ಸೇವೆ ಸಲ್ಲಿಸಿದ್ದು, ಆದರೆ 2017 ರಲ್ಲಿ ಅವರನ್ನು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಜಾ ಮಾಡಿದ್ದರು.

Also Read  ಈ ರಾಶಿಯವರನ್ನು ನೀವು ಮದುವೆಯಾದರೆ ನಿಮ್ಮ ಜೀವನದಲ್ಲಿ ಯಾವುದೇ ಕಾರಣಕ್ಕೂ ಸಮಸ್ಯೆ ಬರುವುದಿಲ್ಲ

ಈ ಕುರಿತು “ನಿಮ್ಮ ಸರ್ಜನ್ ಜನರಲ್ ಆಗಿ ಮತ್ತೊಮ್ಮೆ ಸೇವೆ ಸಲ್ಲಿಸಲು ಸೆನೆಟ್ ದೃಢಪಡಿಸಿದ್ದಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಕಳೆದ ಒಂದು ವರ್ಷದಿಂದ ನಾವು ಅಮೇರಿಕಾದೊಂದಿಗೆ ಬಹಳ ಕಷ್ಟಗಳನ್ನು ಸಹಿಸಿಕೊಂಡಿದ್ದೇವೆ. ನಮ್ಮ ಮಕ್ಕಳ ಭವಿಷ್ಯಕ್ಕಾಗಿ ನಮ್ಮ ರಾಷ್ಟ್ರವನ್ನು ಕೊರೋನಾದಿಂದ ಮುಕ್ತವಾಗಲು ಹಾಗೂ ನಿಮ್ಮೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ” ಎಂದು ವಿವೇಕ್ ಮೂರ್ತಿ ಟ್ವೀಟ್ ಮಾಡಿದ್ದಾರೆ. 1977ರಲ್ಲಿ ಅಮೇರಿಕಾದಲ್ಲಿ ಜನಿಸಿರುವ ಡಾ. ಮೂರ್ತಿಯವರು ಮೂಲತಃ ಕರ್ನಾಟಕದವರು. ತಂದೆ ಡಾ.ಎಚ್.ಎನ್ ಲಕ್ಷ್ಮೀ ನರಸಿಂಹಮೂರ್ತಿ ಮತ್ತು ತಾಯಿ ಮೈತ್ರೇಯಿ ಮೂರ್ತಿ. ದಂಪತಿಗಳಿಬ್ಬರು 1978 ರಲ್ಲಿ ಅಮೆರಿಕಾಕ್ಕೆ ವಲಸೆ ಹೋಗಿ, ವೈದ್ಯ ವೃತ್ತಿ ಮಾಡುತ್ತಿದ್ದರು. ಅಲ್ಲದೇ ಡಾ. ಎಚ್. ಎನ್ ಲಕ್ಷ್ಮೀನರಸಿಂಹ ಮೂರ್ತಿಯವರು ಅಲ್ಲಿ ಜಿಲ್ಲಾ ವೈದ್ಯಕೀಯ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

Also Read  ಸುಡಾನ್‌ ಮಾರುಕಟ್ಟೆಯಲ್ಲಿ ರಾಪಿಡ್ ಸಪೋರ್ಟ್ ಫೋರ್ಸ್ ಶೆಲ್ ದಾಳಿ  21 ಮಂದಿ ಸಾವು- 70ಕ್ಕೂ ಹೆಚ್ಚು ಜನರು ಗಾಯ

error: Content is protected !!
Scroll to Top