ವೈಯಕ್ತಿಕ ಪೂರ್ವದ್ವೇಷದ ಹಿನ್ನೆಲೆ ➤ ಐವರ ತಂಡದಿಂದ ಮೂವರ ಕೊಲೆಯತ್ನ- ಆರೋಪಿಗಳಿಗಾಗಿ ಶೋಧ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 23. ವೈಯಕ್ತಿಕ ದ್ವೇಷದ ಹಿನ್ನೆಲೆ ಐದು ಮಂದಿಯ ತಂಡವೊಂದು ಮೂವರ ಕೊಲೆಗೆ ಯತ್ನಿಸಿದ ಘಟನೆ ಮೂಡಬಿದಿರೆ ತಾಲೂಕಿನ ಕಲ್ಲಬೆಟ್ಟು ಗ್ರಾಮದ ಗಂಟಾಲ್ಕಟ್ಟೆ ಎಂಬಲ್ಲಿ ನಡೆದಿದೆ.

ಗಾಯಗೊಂಡವರನ್ನು ಗಂಟಾಲ್ಕಟ್ಟೆ ಎಂಬಲ್ಲಿನ ಗೋವುಗುಡ್ಡೆ ನಿವಾಸಿ ಶಬೀರ್, ಮಹಮ್ಮದ್ ಅನ್ಸಾರ್ ಮತ್ತು ಇಸ್ಮಾಯಿಲ್ ಎಂದು ಗುರುತಿಸಲಾಗಿದೆ. ಇವರನ್ನು ಮೂಡಬಿದಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರನ್ನು ಅದೇ ಪರಿಸರದ ಸಾಹುಲ್, ಫಾರೂಕ್, ಜಲೀಲ್, ಇಬ್ರಾನ್ ಹಾಗೂ ಶಾಫಿ ಎಂಬವರು ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಅನ್ಸಾರ್ ಎಂಬಾತ ತಮ್ಮ ಮಾವ ಶಬೀರ್ ಹಾಗೂ ಚಿಕ್ಕಪ್ಪ ಇಸ್ಮಾಯಿಲ್ ಜೊತೆಗೆ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಆರೋಪಿಗಳು ಪಿಕ್‌ ಅಪ್ ಮತ್ತು ರಿಟ್ಜ್ ಕಾರಿನ ಮೂಲಕ ಈ ಮೂವರನ್ನು ತಡೆದಿದ್ದು, ತಲವಾರ್ ಮತ್ತು ಮಾರಕಾಸ್ತ್ರಗಳಿಂದ ಕೊಲೆಗೆ ಯತ್ನಿಸಿದ್ದು, ಘಟನೆಯಲ್ಲಿ ಅನ್ಸಾರ್ ಮತ್ತು ಇತರ ಇಬ್ಬರಿಗೂ ಗಂಭೀರ ಗಾಯಗಳಾಗಿವೆ. ಅನ್ಸಾರ್‍ ನ ತಂದೆಯೊಂದಿಗೆ ಆರೋಪಿಗಳು ದ್ವೇಷ ಹೊಂದಿದ್ದು, ಇದೇ ಕಾರಣಕ್ಕಾಗಿ ಕೊಲೆಗೆ ಯತ್ನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಮೂಡುಬಿದಿರೆ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗೆ ತೀವ್ರ ಹುಡುಕಾಟ ಮುಂದುವರಿಸಿದ್ದಾರೆ.

Also Read  ಕುಕ್ಕೆಯಲ್ಲಿ ದಿನಕ್ಕೆ 225 ಆಶ್ಲೇಷ ಪೂಜೆ ಮಾಡಲು ಅವಕಾಶ ➤ ಆಡಳಿತಾಧಿಕಾರಿ ರೂಪಾ ಎಂ.ಜೆ ಸ್ಪಷ್ಟನೆ

error: Content is protected !!
Scroll to Top