? ಸಂಬಳ ಕೇಳಿದ ಕಾರಣಕ್ಕೆ ಟ್ಯಾಪಿಂಗ್ ಮಾಡುವ ಕತ್ತಿಯಿಂದ ಇರಿದ ರಬ್ಬರ್ ತೋಟದ ಮಾಲೀಕ

(ನ್ಯೂಸ್ ಕಡಬ) newskadaba.com ಕಾರ್ಕಳ, ಮಾ. 23.‌ ಸಂಬಳ ಕೇಳಿದ ಎಂಬ ಕಾರಣಕ್ಕೆ ಕಾರ್ಮಿಕನೋರ್ವನನ್ನು ರಬ್ಬರ್ ತೋಟದ ಮಾಲಿಕ ಟ್ಯಾಪಿಂಗ್ ಮಾಡುವ ಕತ್ತಿಯಿಂದ ಇರಿದ ಘಟನೆ ಇಲ್ಲಿನ ತೆಳ್ಳಾರು ಮಾವಿನಕಟ್ಟೆಯ ನೀರಿನ ಟ್ಯಾಂಕ್ ಬಳಿಯಲ್ಲಿ ನಡೆದಿದೆ.

ತೆಳ್ಳಾರಿನ ರಬ್ಬರ್ ತೋಟದ ಮಾಲಕ ಶಿಜು ಹಾಗೂ ಕಾರ್ಮಿಕ ಶ್ಯಾಮ ನಡುವೆ ಸಂಬಳದ ವಿಚಾರದಲ್ಲಿ ಗಲಾಟೆ ನಡೆದಿದ್ದು, ಗಲಾಟೆಯ ವೇಳೆ ಮಾತಿಗೆ ಮಾತು ಬೆಳೆದು ಶಿಜು ಎಂಬವರು ಶ್ಯಾಮಗೆ ಕತ್ತಿಯಿಂದ ಚುಚ್ಚಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಶ್ಯಾಮನನ್ನು ಸ್ಥಳೀಯರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಗೆ ಕರೆದೊಯ್ಯಲಾಗಿದೆ. ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Also Read  ಮುಖ್ಯಮಂತ್ರಿ ಪ್ರಮಾಣ ವಚನಕ್ಕೆ ಭರದ ಸಿದ್ಧತೆ ➤ ನಾಳೆ (ಮೇ.18) 3.30ಕ್ಕೆ ಕಾರ್ಯಕ್ರಮ ?

 

error: Content is protected !!
Scroll to Top