ಸಹಪಾಠಿಗಳಿಂದ ನಿಂದನೆ ➤ 10ನೇ ತರಗತಿಯ ಬಾಲಕ ನೇಣು ಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಹಾಸನ, ಮಾ. 23. ಸಹಪಾಠಿಗಳಿಂದ ನಿಂದನೆಗೊಳಗಾದ ವಿದ್ಯಾರ್ಥಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

 

ಆತ್ಮಹತ್ಯೆ ಮಾಡಿಕೊಂಡ ಬಾಲಕನನ್ನು ಹರ್ಷಿತ್ ಗೌಡ (16) ಎಂದು ಗುರುತಿಸಲಾಗಿದೆ. ಹಾಸನ ತಾಲೂಕಿನ ಕಂಚಮಾರನಹಳ್ಳಿ ಬಳಿಯ ಖಾಸಗಿ ಶಾಲೆಯೊಂದರಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ ಹರ್ಷಿತ್ ಗೆ ಒಂದು ವರ್ಷದ ಹಿಂದೆಯೇ ಸ್ಟ್ರೋಕ್ ಆಗಿದ್ದು, ಇದನ್ನೇ ಕಾರಣವಾಗಿಸಿ ಆತನ ಸಹಪಾಠಿಗಳು ಶಾಲೆಯಲ್ಲಿ ರೇಗಿಸುತ್ತಿದ್ದರು. ಇದೇ ವಿಚಾರವಾಗಿ ಮಾರ್ಚ್ 19 ರಂದು ಶಾಲೆಯಲ್ಲಿ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದ್ದು, ಈ ಸಂದರ್ಭ ಶಿಕ್ಷಕರು ಬುದ್ದಿಮಾತು ಕೂಡ ಹೇಳಿದ್ದರು. ಇದರಿಂದ ಬೇಸತ್ತ ಹರ್ಷಿತ್ ಶಾಲೆ ಬಿಟ್ಟು ಮನೆಗೆ ತೆರಳಿದ ನಂತರ ಮನೆ ಕೆಲಸ ಮುಗಿಸಿ ಬಳಿಕ ದನಗಳನ್ನು ಮೇಯಿಸಲು ಹೋಗಿ, ಜಮೀನಿನ ಬಳಿ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದರ. ಈ ಘಟನೆ ಕುರಿತು ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ರವಿ ಡಿ ಚನ್ನಣ್ಣನವರ್ ವರ್ಗಾವಣೆ ಆದೇಶವನ್ನು ದಿಢೀರ್ ತಡೆ ಹಿಡಿದ ಸರಕಾರ..!!

error: Content is protected !!
Scroll to Top