ಧರ್ಮಸ್ಥಳ: ನಿಡ್ಲೆ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಕಾಲು ಜಾರಿ ಬಿದ್ದು ಬಾಲಕಿ ಮೃತ್ಯು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಮಾ. 22. ಧರ್ಮಸ್ಥಳಕ್ಕೆ ಹೆತ್ತವರೊಂದಿಗೆ ಆಗಮಿಸಿದ್ದ ಬಾಲಕಿಯೋರ್ವಳು ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಕಾಲು ಜಾರಿ ನದಿಗೆ ಬಿದ್ದು ಮೃತಪಟ್ಟ ಘಟನೆ ನಿಡ್ಲೆ ಎಂಬಲ್ಲಿ ನಡೆದಿದೆ.

 

ಮೃತಳನ್ನು ಮಾನಸ (15) ಎಂದು ಗುರುತಿಸಲಾಗಿದೆ. ಬೆಂಗಳೂರಿನ ನಂದಿನಿ‌ ಲೇಔಟ್ ನಿವಾಸಿಗಳಾದ ದೇವಯ್ಯ ಸ್ವಾಮಿ ಕುಟುಂಬಸ್ಥರು ಧರ್ಮಸ್ಥಳಕ್ಕೆ ಆಗಮಿಸಿದ್ದರು. ದೇಶದ ದೇವಸ್ಥಾನದಲ್ಲಿ ಹರಕೆ ಮುಡಿ ಒಪ್ಪಿಸಿ ಬಳಿಕ ಸ್ನಾನಕ್ಕೆಂದು ನೇತ್ರಾವತಿ ನದಿ ಘಟ್ಟಕ್ಕೆ ತೆರಳಿದ್ದು, ಅಲ್ಲಿ ಜನಸಂದಣಿ ಹೆಚ್ಚಿದ್ದರಿಂದ ನಿಡ್ಲೆ ಕುದ್ರಾಯ ಸಮೀಪದ ನದಿಗೆ ಸ್ನಾನಕ್ಕೆಂದು ತೆರಳಿದ್ದರು. ಈ ಸಂದರ್ಭ ಮಾನಸ ಆಕಸ್ಮಿಕವಾಗಿ ಕಾಲು ಜಾರಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.

Also Read  ಸುಳ್ಯ: ಹಬ್ಬಕ್ಕೆ ಬಟ್ಟೆ ಖರೀದಿಸುವ ವಿಚಾರದಲ್ಲಿ ಪತಿ - ಪತ್ನಿಯ ನಡುವೆ ಜಗಳ ► ಪತ್ನಿಯ ಕೊಲೆಯಲ್ಲಿ ಅಂತ್ಯ

error: Content is protected !!
Scroll to Top