? ರುಂಡ ಕತ್ತರಿಸಿ ಬಿಜೆಪಿ ಕಾರ್ಯಕರ್ತನ ಕೊಲೆ ➤ ಮೃತದೇಹದ ಮೇಲೆ ವಾಹನ ಚಲಾಯಿಸಿ ಅಪಘಾತವೆಂದು ಬಿಂಬಿಸಲು ಯತ್ನ

(ನ್ಯೂಸ್ ಕಡಬ) newskadaba.com ಕಲಬುರಗಿ, ಮಾ. 22. ಕೆಲಸ‌ ಮುಗಿಸಿ ಬೈಕಿನಲ್ಲಿ ಮನೆಗೆ ತೆರಳುತ್ತಿದ್ದ ಬಿಜೆಪಿ ಕಾರ್ಯಕರ್ತನೋರ್ವನನ್ನು ರುಂಡ ಕತ್ತರಿಸಿ ಹತ್ಯೆಗೈದಿರುವ ಘಟನೆ ಜಿಲ್ಲೆಯ ಜೇವರ್ಗಿ ತಾಲೂಕಿನ ಯಾತನೂರು ಎಂಬಲ್ಲಿ ನಡೆದಿದೆ.

 

ಹತ್ಯೆಗೀಡಾದವರನ್ನು ಸಂಗನಗೌಡ ನಿಂಗನಗೌಡ ಪಾಟೀಲ (32 ವರ್ಷ) ಎಂದು ಗುರುತಿಸಲಾಗಿದೆ. ಈತ ದಿನನಿತ್ಯದಂತೆ ಕೆಲಸ‌ಮುಗಿಸಿ ತನ್ನ ಬೈಕಿನಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಊರಿನ ಹೊರ ಭಾಗದಲ್ಲಿ ಮೂರು ಬೈಕಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಸಂಗನ ಗೌಡನ ರುಂಡ ಕತ್ತರಿಸಿ, ಬಳಿಕ ಮೃತದೇಹದ ಮೇಲೆ ವಾಹನ ಚಲಾಯಿಸಿ ಅಪಘಾತವೆಂದು ಬಿಂಬಿಸಲು ‌ಮುಂದಾಗಿದ್ದಾರೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ಇದು ಅಪಘಾತವಲ್ಲ ಕೊಲೆ ಎಂಬುವುದು ಬಯಲಾಗಿದೆ. ನೆಲೋಗಿ ಠಾಣಾ ಪೊಲೀಸರು ಪ್ರಕರಣ ‌ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Also Read  ಹವಾಯಿ ನಿಮಾನದಲ್ಲಿ ಪ್ರಕ್ಷುಬ್ಧತೆ ➤ಹಲವು ಮಂದಿಗೆ ಗಾಯ

 

 

error: Content is protected !!
Scroll to Top