ಪುತ್ತೂರು: ಬೈಕ್ ಸ್ಕಿಡ್ ಆಗಿ ಓರ್ವ ವಿದ್ಯಾರ್ಥಿ ಮೃತ್ಯು- ಮತ್ತೋರ್ವ ಗಂಭೀರ

(ನ್ಯೂಸ್ ಕಡಬ) newskadaba.com ಪುತ್ತೂರು, ಮಾ. 22. ಬೈಕ್ ಸ್ಕಿಡ್ ಆದ ಪರಿಣಾಮ ಕಾಲೇಜ್ ವಿದ್ಯಾರ್ಥಿಯೋರ್ವ ದಾರುಣವಾಗಿ ಮೃತಪಟ್ಟು, ಮತ್ತೋರ್ವ ವಿದ್ಯಾರ್ಥಿ ಗಂಭೀರ ಗಾಯಗೊಂಡ ಘಟನೆ ಕಾಣಿಯೂರು – ಪುತ್ತೂರು ರಸ್ತೆಯ ಮಾಂತೂರು ಎಂಬಲ್ಲಿ ಭಾನುವಾರ ತಡರಾತ್ರಿ ನಡೆದಿದೆ.


ಮೃತರನ್ನು ಕೊಡಗು ಜಿಲ್ಲೆಯ ಸೋಮವಾರ ಪೇಟೆ ನಿವಾಸಿ ಚೇತನ್ ಎಂದು ಗುರುತಿಸಲಾಗಿದೆ. ಅವರ ಸ್ನೇಹಿತ ಬೆಳ್ಳಾರೆ ನಿವಾಸಿ ಸುದೀಪ್ ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಚೇತನ್ ಅವರು ಪುತ್ತೂರು ಪಿಜಿಯಲ್ಲಿದ್ದು ಭಾನುವಾರದಂದು ಮಾಣಿ ಸಾದಿಕುಕ್ಕು ಜಾತ್ರೆಗೆ ಸ್ನೇಹಿತ ಸುದೀಪ್ ಜೊತೆ ತೆರಳಿದ್ದು, ಬಳಿಕ ರಾತ್ರಿ ಸುದೀಪ್ ಅವರ ಮನೆಗೆ ಹೋಗುತ್ತಿದ್ದ ವೇಳೆ ಮಾಂತೂರು ಸಮೀಪ ಬೈಕ್ ಸ್ಕಿಡ್ ಆಗಿದೆ. ಗಂಭೀರ ಗಾಯಗೊಂಡಿದ್ದ ಇಬ್ಬರನ್ನು ಸ್ಥಳೀಯರು ಆಟೋ ರಿಕ್ಷಾದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆ ತಂದಿದ್ದರೂ ಇದರ ಮಧ್ಯೆ ಚೇತನ್ ಮೃತಪಟ್ಟಿದ್ದರು. ಇವರಿಬ್ಬರೂ ಪುತ್ತೂರಿನ ನೆಹರು ನಗರದಲ್ಲಿರುವ ವಿವೇಕಾನಂದ ಪದವಿ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ.

Also Read  ಉಪ್ಪಿನಂಗಡಿಯ ನಾಗರಿಕರನ್ನು ದೇಶದ್ರೋಹಿಗಳಿಗೆ ಹೋಲಿಸಿದ ಶಾಸಕರ ಹೇಳಿಕೆ ವಾಪಸ್ ಪಡೆಯಬೇಕು- ಪಿಎಫ್ಐ ➤ ಸಂಘಪರಿವಾರದಲ್ಲಿ ಇರುವಷ್ಟು ದೇಶದ್ರೋಹಿಗಳು ಬೇರೆಲ್ಲೂ ಇಲ್ಲ- ಹಮೀದ್ ಮೆಜೆಸ್ಟಿಕ್

error: Content is protected !!
Scroll to Top