ಸಿಡಿ ಲೇಡಿ ಜೊತೆ ನಾಲ್ಕು ತಿಂಗಳಿನಿಂದ ಸಂಪರ್ಕದಲ್ಲಿದ್ದ ಮತ್ತೋರ್ವ ಬಿಜೆಪಿ ಶಾಸಕ ➤ ಎಸ್ಐಟಿ ಅಧಿಕಾರಿಗಳಿಗೆ ಸಿಕ್ಕಿತು ಸ್ಫೋಟಕ ಮಾಹಿತಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ.22. ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಂದು ಪ್ರಮುಖ ಸುದ್ದಿ ಹೊರಬಿದ್ದಿದೆ.

ಸಿಡಿ ಲೇಡಿಯ ಜೊತೆಯಲ್ಲಿ ಉತ್ತರ ಕರ್ನಾಟಕ ಮೂಲದ ಬಿಜೆಪಿ ಶಾಸಕರೊಬ್ಬರು ಕಳೆದ 4 ತಿಂಗಳುಗಳಿಂದ ಸಂಪರ್ಕದಲ್ಲಿದ್ದರು ಎಂಬ ಸ್ಫೋಟಕ ವಿಚಾರ ಹೊರಬಂದಿದೆ. ಯುವತಿಯ ಮೊಬೈಲ್ ಕಾಲ್ ಲಿಸ್ಟ್ (ಸಿಡಿಆರ್‌) ಶೋಧಿಸಿದ ಎಸ್ಐಟಿ ಅಧಿಕಾರಿಗಳಿಗೆ ಈ ಮಹತ್ವದ ಸುದ್ದಿ ತಿಳಿದುಬಂದಿದ್ದು, ಯುವತಿಯಿಂದ ಶಾಸಕರ ಮೊಬೈಲ್‌ಗೆ ನಿರಂತರವಾಗಿ ಕರೆಗಳು ಹೋಗಿರುವುದು ಪತ್ತೆಯಾಗಿದೆ. ಜಾರಕಿಹೊಳಿ ಅವರ ರಾಜಕೀಯ ವಿರೋಧಿ ಬಣದಲ್ಲಿರುವ ಈ ಬಿಜೆಪಿ ಶಾಸಕ ಯುವತಿಯ ಪ್ರತಿಯೊಂದು ನಡೆಯನ್ನು ವಿರೋಧ ಪಕ್ಷದ ಶಾಸಕರೊಬ್ಬರೊಂದಿಗೆ ಹಂಚಿಕೊಳ್ಳುತ್ತಿದ್ದರು ಎಂಬ ಬಗ್ಗೆ ಗುಮಾನಿ ಎದ್ದಿದೆ. ಒಟ್ಟಿನಲ್ಲಿ ಸಿಡಿ ಹಿಂದಿನ ರಹಸ್ಯ ನಾಲ್ಕೈದು ತಿಂಗಳ ಹಿಂದೆಯೇ ತೆರೆಮರೆಯಲ್ಲಿ ನಡೆಯುತ್ತಿತ್ತು ಎನ್ನಲಾಗಿದೆ.

Also Read  ಕಡಬ: ರಾಮಕುಂಜ ಶಾರದಾಂಬ ಭಜನಾ ಮಂದಿರದಿಂದ ತೆಂಗಿನ ಕಾಯಿ ಕಳ್ಳತನ- ದೂರು ದಾಖಲು

 

 

error: Content is protected !!
Scroll to Top