(ನ್ಯೂಸ್ ಕಡಬ) newskadaba.com ಕಡಬ, ಮಾ.21. ಹತ್ತು ಹಲವು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಬಡ ಜನರ ಏಳಿಗೆಗಾಗಿ ನಿರಂತರವಾಗಿ ಶ್ರಮಿಸಿದ ರಾಜಕೀಯ ಪಕ್ಷವಿದ್ದರೆ ಅದು ಕಾಂಗ್ರೆಸ್ ಮಾತ್ರ. ಕಾಂಗ್ರೆಸ್ ಈ ದೇಶಕ್ಕಾಗಿ ನೀಡಿದ ಕೊಡುಗೆಯನ್ನು ಹಿರಿಯರು ಯುವ ಸಮೂಹಕ್ಕೆ ತಿಳಿ ಹೇಳಬೇಕಾದ ಅವಶ್ಯಕತೆಯಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅವರು ಅಭಿಪ್ರಾಯಪಟ್ಟರು.
ಅವರು ಭಾನುವಾರದಂದು ಕಡಬದ ಭಾಗೀರಥಿ ಟವರ್‍ಸ್‌ನ ವಠಾರದಲ್ಲಿ ಜರಗಿದ ಕಡಬ ಬ್ಲಾಕ್ ಕಾಂಗ್ರೆಸ್ ಹಾಗೂ ಬ್ಲಾಕ್ ಯುವಕ ಕಾಂಗ್ರೆಸ್‌ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಿಥುನ್ ರೈ, ಮುಂಬರುವ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಲು ಈ ಕಾರ್ಯಕ್ರಮ ನಾಂದಿಯಾಗಲಿ ಎಂದರು. ಚಿಕ್ಕಮಗಳೂರಿನ ಸುಧೀರ್ ಕುಮಾರ್ ಕೊಪ್ಪ ಪ್ರಧಾನ ಭಾಷಣ ಮಾಡಿದರು. ಬ್ಲಾಕ್ ಕಾಂಗ್ರೆಸ್‌ನ ನೂತನ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಬಿಳಿನೆಲೆ ಹಾಗೂ ಯುವ ಕಾಂಗ್ರೆಸ್‌ನ ನೂತನ ಅಧ್ಯಕ್ಷ ಅಭಿಲಾಷ್ ಪಿ.ಕೆ. ಮಾತನಾಡಿ ಸರ್ವರ ಸಹಕಾರ ಕೋರಿದರು. ಜಿ.ಪಂ.ಮಾಜಿ ಸದಸ್ಯ ಭರತ್ ಮುಂಡೋಡಿ ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಶುಭ ಹಾರೈಸಿದರು.
ಕೆಪಿಸಿಸಿ ಸದಸ್ಯ ಡಾ|ರಘು, ಯುವ ಕಾಂಗ್ರೆಸ್ ಉಪಾಧ್ಯಕ್ಷ ಗಿರೀಶ್ ಆಳ್ವಾ, ಅಲ್ಪ ಸಂಖ್ಯಾಕ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ., ಸುಳ್ಯ ಬ್ಲಾಕ್‌ನ ಕೆಪಿಸಿಸಿ ಉಸ್ತುವಾರಿ ಕೃಷ್ಣಪ್ಪ, ಜಿ.ಪಂ. ಸದಸ್ಯರಾದ ಪಿ.ಪಿ.ವರ್ಗೀಸ್, ಸರ್ವೋತ್ತಮ ಗೌಡ, ಕಾಂಗ್ರೆಸ್ ಮುಖಂಡರಾದ ಬೈತಡ್ಕ ಶೀನಪ್ಪ ಗೌಡ, ಬಾಲಕೃಷ್ಣ ಗೌಡ ಬಳ್ಳೇರಿ, ವಿಜಯ ಕುಮಾರ್ ರೈ ಕರ್ಮಾಯಿ, ಸೈಮನ್ ಸಿ.ಜೆ., ಎ.ಎಸ್.ಶರೀಫ್, ಟಿ.ಎಂ.ಶಹೀದ್, ಕೆ.ಪಿ.ಥಾಮಸ್, ಎಚ್.ಕೆ.ಇಲ್ಯಾಸ್, ಶಿವರಾಮ್, ಸತೀಶ್‌ಕುಮಾರ್ ಕೆಡೆಂಜಿ, ದಿವಾಕರ ಗೌಡ ಶಿರಾಡಿ, ರೋಯಿ ಅಬ್ರಹಾಂ, ಫಝಲ್ ಕೋಡಿಂಬಾಳ, ಯತೀಶ್ ಬಾನಡ್ಕ, ಭಾಸ್ಕರ ಗೌಡ ಕೋಡಿಂಬಾಳ, ಆಶಾ ಲಕ್ಷ್ಮಣ, ಅಶೋಕ್ ನೆಕ್ರಾಜೆ, ಕೆ.ಟಿ.ವಲ್ಸಮ್ಮ, ಪ್ರಸಾದ್ ಪುತ್ತೂರು, ಮಲ್ಲಿಕಾ ಪಕ್ಕಳ, ಶಿವಶಂಕರ ನೆಟ್ಟಣ, ವಿನೀತಾ ಶಿರಾಡಿ, ಶ್ಯಾಮಲಾ ಐತ್ತೂರು ಮುಂತಾದವರು ಉಪಸ್ಥಿತರಿದ್ದರು.
ದೆಹಲಿಯಲ್ಲಿ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಭಾಗವಹಿಸಿದ ವಿದ್ಯಾರ್ಥಿ ಕೆಡೆಟ್ ರಕ್ಷಾ ಅಂಚನ್ ಹಾಗೂ ಕಡಬ ಬ್ಲಾಕ್ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರುಗಳನ್ನು ಸಮ್ಮಾನಿಸಿ ಗೌರವಿಸಲಾಯಿತು. ಬ್ಲಾಕ್ ಕಾಂಗ್ರೆಸ್‌ನ ನಿರ್ಗಮನ ಅಧ್ಯಕ್ಷ ಗಣೇಶ್ ಕೈಕುರೆ ಸ್ವಾಗತಿಸಿ, ಪ್ರಸ್ತಾವನೆಗೈದರು. ತಾ.ಪಂ.ಸದಸ್ಯೆ ಉಷಾ ಅಂಚನ್ ನಿರೂಪಿಸಿ, ಅಶ್ರಫ್ ಶೇಡಿಗುಂಡಿ ವಂದಿಸಿದರು.