ಕಡಬ: ಎ.ಕೆ. ಡಿಲಕ್ಸ್ ಬೋರ್ಡಿಂಗ್ & ಲಾಡ್ಜಿಂಗ್ ಶುಭಾರಂಭ ➤ ಸುಸಜ್ಜಿತ ಎಸಿ/ನಾನ್ ಎಸಿ ರೂಂಗಳು ಲಭ್ಯ

(ನ್ಯೂಸ್ ಕಡಬ) newskadaba.com ಕಡಬ, ಮಾ.19. ಇಲ್ಲಿನ ಪಂಜ ರಸ್ತೆಯಲ್ಲಿರುವ ಎ.ಕೆ.ಟವರ್ಸ್ ನಲ್ಲಿ ಕಡಬದಲ್ಲಿ ಮೊತ್ತ ಮೊದಲ ಬಾರಿಗೆ ಎ.ಕೆ. ಡಿಲಕ್ಸ್ ಬೋರ್ಡಿಂಗ್ ಮತ್ತು ಲಾಡ್ಜ್ಂಗ್, ಸರ್ವೀಸ್ ಅಪಾರ್ಮೆಂಟ್ ಮಾ.18ರಂದು ಶುಭಾರಂಭಗೊಂಡಿತು.

ಸಂಸ್ಥೆಯಲ್ಲಿ ಬಹು|ಅಸ್ಸಯ್ಯದ್ ಝೈನುಲ್ ಅಬಿದೀನ್ ತಂಙಳ್ ಅಲ್ ಬುಖಾರಿ ಎಣ್ಮೂರು ಅವರು ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಕಡಬ ಆರ್.ಜೆ.ಎಂ.ನ ಖತೀಬರಾದ ಅಲ್ಹಾಜ್ ಪಿ.ಎಂ. ಇಬ್ರಾಹಿಂ ದಾರಿಮಿ, ಕಡಬ ಕೇಂದ್ರ ಜುಮ್ಮಾ ಮಸೀದಿಯ ಖತೀಬರಾದ ಮಹಮ್ಮದ್ ಫಾರೂಕ್ ಹಿಮಮಿ ಸಖಾಫಿ ಉಪಸ್ಥಿತರಿದ್ದರು. ಬಳಿಕ ಲಾಡ್ಜಿಂಗನ್ನು ಜಿ.ಪಂ. ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಕಡಬ ಉದ್ಘಾಟಿಸಿ ಮಾತನಾಡಿ, ಬೆಳೆಯುತ್ತಿರುವ ಕಡಬದಲ್ಲಿ ಅತಿ ಅಗತ್ಯವಾಗಿರುವ ಬೋರ್ಡಿಂಗ್ ಮತ್ತು ಲಾಡ್ಜಿಂಗ್ ನ್ನು ಆಲಿ ಮತ್ತು ಅವರ ಮಕ್ಕಳು ಸಮಾಜಕ್ಕೆ ನೀಡಿದ್ದಾರೆ, ಉದ್ಯಮದಲ್ಲಿ ಯಶಸ್ವಿಯಾಗಿರುವ ಇವರು ಕೃಷಿ ಉತ್ಪನ್ನಗಳನ್ನು ಖರೀದಿಸಿ ಕೃಷಿಕರಿಗೂ ಅನುಕೂಲಕರ ವಾತಾವರಣ ನಿರ್ಮಿಸಿದ್ದಾರೆ, ಪ್ರಾಮಾಣಿಕ ವ್ಯವಹಾರದಿಂದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೋಡಿಂಬಾಳ ಆರ್.ಜೆ.ಎಂ. ಖತೀಬರಾದ ಸಂಶುದ್ದೀನ್ ಸಅದಿ, ಕಡಬ ಸೈಂಟ್ ಜೋಕಿಮ್ಸ್ ಚರ್ಚ್ ನ ಧರ್ಮಗುರು ರೆ.ಫಾ.ರೋನಾಲ್ಡ್ ಲೋಬೋ, ಕೋಡಿಂಬಾಳ ಮಜ್ಜಾರು ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಕೆ. ಪ್ರಸಾದ್ ಕೆದಿಲಾಯ, ಮೆಸ್ಕಾಂ ಅಧಿಕಾರಿ ಸಜಿ ಕುಮಾರ್, ಜಿ.ಪ. ಸದಸ್ಯ ಹಾಜಿ ಸೈಯದ್ ಮೀರಾ ಸಾಹೇಬ್ ಅವರು ಮಾತನಾಡಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಕಡಬ ಜಿ.ಪಂ. ಸದಸ್ಯ ಪಿ.ಪಿ.ವರ್ಗೀಸ್, ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ತ್ರಿಮೂರ್ತಿ, ಕಡಬ ಎಸ್.ಐ. ರುಕ್ಮ ನಾಯ್ಕ್, ಫೆಡರಲ್ ಬ್ಯಾಂಕ್ ಮ್ಯಾನೇಜರ್ ಕೆ.ಎಂ.ಕೃಷ್ಣ ಕುಮಾರ್, ಇಂಜಿನಿಯರ್ ಸಮೀರ್, ಸೀಮಾ ಕನ್ಸ್ಟೇಕ್ಷನ್ ಪುತ್ತು ಮೇಸ್ತ್ರಿ, ಪ್ರಮುಖರಾದ ಅಬ್ದುಲ್ ರಹ್ಮಾನ್, ಆದಂ ಹಾಜಿ ನೆಟ್ಟಣ, ಮೆಸ್ಕಾಂ ಜೆ.ಇ. ಸತ್ಯನಾರಾಯಣ, ಅಬ್ಬಾಸ್ ಹಾಜಿ ನೆಟ್ಟಣ, ಕಡಬ ಆರ್.ಜೆ.ಎಂ.ನ ಅಧ್ಯಕ್ಷ ಹಾಜಿ ಅಬ್ದುಲ್ ಖಾದರ್ ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕರಾದ ಹಾಜಿ ಡಿ.ಎಂ. ಆಲಿ, ಕಲಂದರ್ ಎ,ಕೆ, ಜಂಶಾದ್ ಎ.ಕೆ ಅತಿಥಿಗಳನ್ನು ಸ್ವಾಗತಿಸಿದರು. ಮಾಜಿ ಗ್ರಾ.ಪಂ. ಸದಸ್ಯ ಅಶ್ರಫ್ ಶೇಡಿಗುಂಡಿ ಅವರು ಸ್ವಾಗತಿಸಿ, ವಂದಿಸಿದರು. ಕಡಬ ಗ್ರಾ.ಪಂ. ಮಾಜಿ ಅಧ್ಯಕ್ಷ ಹನೀಪ್ ಕೆ.ಎಂ. ಶೆರೀಪ್ ಎ.ಎಸ್. ಸೇರಿದಂತೆ ಹಲವಾರು ಆಗಮಿಸಿ ಶುಭ ಹಾರೈಸಿದರು. ಶೆರೀಪ್ ಕೋಡಿಂಬಾಳ, ಲೀಮಾ ಕುಂಬ್ರ, ಎ.ಕೆ. ಟೀಮ್ ವರ್ಕರ್ಸ್ ನ ಎಲ್ಲಾ ಸದಸ್ಯರು ಮೊದಲಾದವರು ಸಹಕರಿಸಿದರು.

Also Read  ಮಣಿಪಾಲ: ಅಕ್ರಮ ಗಾಂಜಾ ಮಾರಾಟಕ್ಕೆ ಯತ್ನ ➤ ಮೂವರ ಬಂಧನ

ನೂತನ ಸಂಸ್ಥೆಯಲ್ಲಿ ದಿನ ಬಾಡಿಗೆ ರೂಂಗಳು, ತಿಂಗಳ ಬಾಡಿಗೆ ಹಾಗೂ ಹೊರ ನಗರಗಳಿಂದ ಕಾರ್ಯಕ್ರಮ ನಿಮಿತ್ತ ಆಗಮಿಸುವವರಿಗೆ ಶುಭಾರಂಭದ ಪ್ರಯುಕ್ತ ವಿಶೇಷ ರಿಯಾಯಿತಿ ದರದಲ್ಲಿ ಕೊಠಡಿಗಳು ಲಭ್ಯವಿದೆ ಎಂದು ಮಾಲಿಕರು ತಿಳಿಸಿದ್ದಾರೆ.

error: Content is protected !!
Scroll to Top