ಅರಂತೋಡು: ಮಾ. 26ರಂದು ಡಾ.ಕೆ.ಎಮ್ ಶಾಹ್ ಮುಸ್ಲಿಯಾರ್ ಅನುಸ್ಮರಣೆ ಹಾಗೂ ಆಡಳಿತ ಮಂಡಳಿ ಕಛೇರಿ ಉದ್ಘಾಟನಾ ಸಮಾರಂಭ

(ನ್ಯೂಸ್ ಕಡಬ) newskadaba.com ಸುಳ್ಯ, ಮಾ. 18. ಅರಂತೋಡು ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಸುಮಾರು 35 ವರ್ಷಗಳ ಕಾಲ ಸೇವೆಗೈದು ನಮ್ಮನ್ನಗಲಿದ ಮರ್ಹೂಂ ಶೈಖುನಾ ಡಾ.ಕೆ.ಎಮ್.ಶಾಹ್ ಮುಸ್ಲಿಯಾರ್ ಅವರ ಅನುಸ್ಮರಣಾ ಕಾರ್ಯಕ್ರಮ ಹಾಗೂ ಆಧುನೀಕರಣಗೊಂಡ ಮದರಸ ಅಧ್ಯಾಪಕರ ವಿಶ್ರಾಂತಿ ಕೊಠಡಿ, ಆಡಳಿತ ಕಛೇರಿ ಮತ್ತುಮಸೀದಿಗೆ ಅಳವಡಿಸಿದ ಹವಾನಿಯಂತ್ರಿತ ಉದ್ಘಾಟನೆ ಹಾಗೂ ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್ ಜಮಾಅತ್ ಗೆ ನೀಡಿದ ಬಾಡಿಗೆ ಕೊಠಡಿಯ ದಾಖಲೆ ಪತ್ರ ಹಸ್ತಾಂತರ ಕಾರ್ಯಕ್ರಮವು ಮಾರ್ಚ್‌ 26 ರಂದು ಅರಂತೋಡಿನಲ್ಲಿ ನಡೆಯಲಿದೆ.

 

ಅರಂತೋಡು ಬದ್ರಿಯಾ ಜುಮ್ಮಾಮಸೀದಿ ಅಧ್ಯಕ್ಷರಾದ ಹಾಜಿ ಅಶ್ರಫ್ ಗುಂಡಿ ಇದರ ಅಧ್ಯಕ್ಷತೆ ವಹಿಸಲಿದ್ದಾರೆ. ಮಾರ್ಚ್‌ 26ರಂದು ಬೆಳಿಗ್ಗೆ 6 ಗಂಟೆಗೆ ಮೌಲಿದ್ ಕಾರ್ಯಕ್ರಮ ನಂತರ 7 ಗಂಟೆಗೆ ಹಾಜಿ ಅಶ್ರಫ್ ಗುಂಡಿ ಧ್ವಜಾರೋಹಣ ಮಾಡಲಿದ್ದಾರೆ. ಸಂಜೆ 4 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಬದ್ರಿಯಾ ಜುಮ್ಮಾಮಸೀದಿ ಖತೀಬರಾದ ಬಹು ಅಲ್ ಹಾಜ್ ಇಸ್ಹಾಖ್ ಬಾಖವಿ ದುವಾ ನೇರವೇರಿಸಲಿದ್ದಾರೆ. ಆಧುನೀಕರಣಗೊಂಡ ಮದರಸವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಉದ್ಘಾಟಿಸಲಿದ್ದಾರೆ. ಆಡಳಿತ ಮಂಡಳಿ ಕಛೇರಿಯನ್ನು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಅಧ್ಯಕ್ಷ ಟಿ.ಎಮ್. ಶಹೀದ್ ತೆಕ್ಕಿಲ್ ಉದ್ಘಾಟನೆ ಮಾಡಲಿದ್ದಾರೆ. ನಾಮಫಲಕ ಅನಾವರಣವನ್ನು ಬೆಂಗಳೂರು ಅಭಿಮಾನ್ ಗ್ರೂಪ್ ಮುಖ್ಯಸ್ಥ ಹಾಜಿ ಬಿ.ಎಮ್. ಉಮ್ಮರ್ ನಿರ್ವಹಿಸಲಿದ್ದಾರೆ. ಅಧ್ಯಾಪಕರ ವಿಶ್ರಾಂತಿ ಕೊಠಡಿಯನ್ನು ಕೆಪಿಸಿಸಿ ಅಲ್ಪಸಂಖ್ಯಾತ ರಾಜ್ಯ ಘಟಕದ ಉಪಾಧ್ಯಕ್ಷ ಡಾ.ಅಬ್ದುಲ್ ಶಕೀಲ್ ಉದ್ಘಾಟನೆ ಮಾಡಲಿದ್ದಾರೆ. ಕೆ.ಎಮ್.ಇಬ್ರಾಹಿಂ ಮತ್ತು ಮಕ್ಕಳು ಮರ್ಹೂಂ ಖದೀಜರವರ ಸ್ಮರಣಾರ್ಥವಾಗಿ ನೀಡಿದ ಹವಾ ನಿಯಂತ್ರಣವನ್ನು ಮಂಗಳೂರು ಕಸ್ತೂರ್ ಬಾ ಮೆಡಿಕಲ್ ಕಾಲೇಜು ಫ್ರೊಫೆಸರ್ ಡಾ.ಕೆ.ಎಮ್. ತಾಜುದ್ದೀನ್ ಉದ್ಘಾಟಿಸಲಿದ್ದಾರೆ. ಅನ್ವಾರುಲ್ ಹುದಾ ಎಸೋಸಿಯೆಶನ್ ವತಿಯಿಂದ ದಾಖಲೆ ಪತ್ರವನ್ನು ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ಮಜೀದ್ ಹಸ್ತಾಂತರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಜಿಲ್ಲಾಧ್ಯಕ್ಷ ಹಾಜಿ ಮಹಮ್ಮದ್ ಕುಕ್ಕುವಳ್ಳಿ, ನಿವೃತ್ತ ಅಧಿಕಾರಿ ಇಬ್ರಾಹಿಂ ಗೂನಡ್ಕ, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯ ಹಾಜಿ ಕೆ.ಎಮ್.ಮುಸ್ತಫಾ ಸುಳ್ಯ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲುಕ್ಮಾನ್ ಬಂಟ್ವಾಳ, ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ, ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಅಧ್ಯಕ್ಷ ಬುಶ್ರಾ ಅಬ್ದುಲ್ ಅಝೀಝ್ ಕಾವು, ಕತ್ತಾರ್ ಇಬ್ರಾಹಿಂ ಮಂಡೆಕೋಲು, ಇಕ್ಬಾಲ್ ಎಲಿಮಲೆ, ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಶಂಸುದ್ದೀನ್, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್, ಆದಂ ಹಾಜಿ ಕಮ್ಮಾಡಿ, ಅಬ್ದುಲ್ಲಾ ಎಣ್ಮೂರು, ಅಬ್ದುಲ್ ಕಲಾಂ ಸುಳ್ಯ ಮೊದಲಾದ ಗಣ್ಯ ವ್ಯಕ್ತಿಗಳು ಆಗಮಿಸಲಿದ್ದಾರೆ. ರಾತ್ರಿ 7.30 ಗಂಟೆಗೆ ಅಲ್ ಹಾಜ್ ಡಾ।ಕೆ.ಎಮ್ ಶಾಹ್ ಮುಸ್ಲಿಯಾರ್ ರವರ ಅನುಸ್ಮರಣಾ ಕಾರ್ಯಕ್ರಮ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷರಾದ ಹಾಜಿ ಅಶ್ರಫ್ ಗುಂಡಿಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಸಮಸ್ತ ಮುಶಾವರ ಅಧ್ಯಕ್ಷರಾದ ಬಹು ಅಲ್ ಹಾಜ್ ಝೈನುಲ್ ಅಬಿದೀನ್ ತಂಙಳ್ ಕುನ್ನುಂಗೈ ನೆರವೇರಿಸಲಿದ್ದಾರೆ. ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ ಖತೀಬರಾದ ಬಹು ಅಲ್ ಹಾಜ್ ಇಸ್ಹಾಖ್ ಬಾಖವಿ ಪ್ರಸ್ತಾವಿಕ ಭಾಷಣ ಮಾಡಲಿದ್ದಾರೆ. ಖ್ಯಾತ ವಾಗ್ಮಿ ಬಹು। ಯು.ಕೆ.ಮಹಮ್ಮದ್ ಹನೀಫ್ ನಿಝಾಮಿ ಮೊಗ್ರಾಲ್ ಪುತ್ತೂರು ಅನುಸ್ಮರಣಾ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪೇರಡ್ಕ ಜುಮ್ಮಾ ಮಸೀದಿ ಖತೀಬರಾದ ಬಹು ಸುಹೈಲ್ ದಾರಿಮಿ, ಅರಂತೋಡು ಮದರಸ ಸದರ್ ಮುಅಲ್ಲಿಂ ನವಾಜ್ ದಾರಿಮಿ, ಸಾಜಿದ್ ಅಝ್-ಹರಿ, ಟಿ.ಎಮ್.ಬಾಬ ಹಾಜಿ ತೆಕ್ಕಿಲ್, ಅಬ್ದುಲ್ ಖಾದರ್ ಸುಂಕದಕಟ್ಟೆ, ತಾಜ್ ಮಹಮ್ಮದ್ ಸಂಪಾಜೆ, ಹಮೀದ್ ಹಾಜಿ ಸುಳ್ಯ, ಅಬೂಬಕ್ಕರ್ ಮಂಗಳ, ಹಾಜಿ ಉಮ್ಮರ್, ಹುಸೈನ್ ಸಿರಾಜ್ ಆತೂರ್, ಸಿ.ಹೆಚ್.ಅಝೀಝ್, ಅಬ್ದುಲ್ ಕಾದರ್ ಬಾಯಂಬಾಡಿ, ಅಲಿಹಾಜಿ, ಮಜೀದ್ ಜನತಾ, ಲತೀಫ್ ಅರ್ಲಡ್ಕ, ಸೈಫುದ್ದೀನ್ ಪಠೇಲ್, ಕೆ.ಎಮ್. ಉಸ್ಮಾನ್, ಅಬೂಬಕ್ಕರ್ ಪಾರೆಕ್ಕಲ್ ಸೇರಿದಂತೆ ಮುಂತಾದವರು ಭಾಗವಹಿಸಲಿದ್ದಾರೆ.

Also Read  ಮಂಗಳೂರು: ರುಂಡ ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆ

error: Content is protected !!
Scroll to Top