ಇನ್ಮುಂದೆ ಕಡಬದಲ್ಲಿ 24 ಗಂಟೆ ನಿರಂತರ ವಿದ್ಯುತ್…‼️ ✍? ವಿಜಯ ಕುಮಾರ್ ಕಡಬ

ಕಡಬ, ಮಾ.18. ಯಾವಾಗ ನೋಡಿದರೂ ಲೋವೋಲ್ಟೆಜ್ ಸಮಸ್ಯೆ, ನಿರಂತರ ವಿದ್ಯುತ್ ಕಡಿತದಿಂದ ಸದಾ ಸುದ್ದಿಯಾಗುತ್ತಿದ್ದ ಕಡಬ ಮೆಸ್ಕಾಂ ಉಪ ವಿಭಾಗ ಇದೀಗ ಸಮಸ್ಯೆಯಿಂದ ಮುಕ್ತಗೊಂಡಿದೆ, ಇನ್ನು ದಿನದ 24 ಗಂಟೆಯೂ ತ್ರಿಪೇಸ್ ಗುಣಮಟ್ಟದ ವಿದ್ಯುತ್ ಸರಬರಾಜರಾಗಲಿದೆ.

ಇದಕ್ಕೆ ಕಡಬ ಮೆಸ್ಕಾಂಗೆ ಹ್ಯಾಟ್ಸಪ್ ಹೇಳಲೇಬೇಕು. ಏನಿಲ್ಲಾಂದ್ರೂ ವರ್ಷದಲ್ಲಿ ಎರಡು ಮೂರು ಬಾರಿಯಾದರೂ ಮೆಸ್ಕಾಂ ವಿರುದ್ದ ಪ್ರತಿಭಟನೆಗಳು ನಡೆಯುತ್ತಲೇ ಇರುತ್ತಿತ್ತು, ಈ ಸಂದರ್ಭದಲ್ಲಿ ಅಧಿಕಾರಿಗಳು ಒಂದಿಲ್ಲ ಒಂದು ತಾಂತ್ರಿಕ ಕಾರಣಗಳನ್ನು ಕೊಡುತ್ತಿದ್ದರು. ಆದರೆ ಇದನ್ನು ನಂಬುವ ಸ್ಥಿತಿಯಲ್ಲಿ ಇಲ್ಲಿನ ಜನರು ಮಾತ್ರ ಸಿದ್ದರಿರಲಿಲ್ಲ, ಅಂತೂ ಇಂತೂ ಕಡಬ ಮೆಸ್ಕಾಂಗೆ ಹೊಸ ಸಾಮರ್ಥ್ಯದ ಟಿಸಿ ಅಳವಡಿಕೆಯಿಂದ ಈ ಸಮಸ್ಯೆಗೆ ಪರಿಹಾರ ದೊರೆತಿದೆ.

ಕಡಬ ಮೆಸ್ಕಾಂ ಉಪ ವಿಭಾಗದಲ್ಲಿ 5+5 ಮೆಘವ್ಯಾಟ್ ಸಾಮರ್ಥ್ಯದ ಎರಡು ಪರಿವರ್ತಕಗಳು ಇತ್ತು, ಈ ಪರಿವರ್ತಕದಲ್ಲಿ ಕಡಬ, ನೆಲ್ಯಾಡಿ ಭಾಗಕ್ಕೂ ವಿದ್ಯುತ್ ಸರಬರಾಜು ಆಗುತ್ತಿತ್ತು, ಈ ವೇಳೆ ಪುತ್ತೂರಿನಿಂದ ಏಕ ಮಾರ್ಗದಲ್ಲಿ ವಿದ್ಯುತ್ ಸರಬರಾಜು ಆಗುತ್ತಿತ್ತು, ಈ ಸಂದರ್ಭದಲ್ಲಿ ಸರಬರಾಜು ಆಗುತ್ತಿದ್ದ ವಿದ್ಯುತ್ ಪ್ರಮಾಣದಲ್ಲಿ ಹೆಚ್ಚಿನ ಬೇಡಿಕೆ ಇತ್ತು. ಈ ಬೇಡಿಕೆಯನ್ನು ಪೊರೈಸಲು ಮೆಸ್ಕಾಂ ಹರ ಸಾಹಸ ಪಡುತ್ತಿತ್ತು, ಓವರ್ ಲೋಡ್ ಸಮಸ್ಯೆಯಿಂದ ಜಂಪರ್ ಕಟ್, ಟಿಸಿಗಳಿಗೆ ಒಂದಿಲ್ಲೊಂದು ತಾಂತ್ರಿಕ ಸಮಸ್ಯೆಗಳು ಮೆಸ್ಕಾಂನ್ನು ಕಾಡುತ್ತಿತ್ತು, ಅಲ್ಲದೆ 6 ಗಂಟೆ ತ್ರಿಪೇಸ್ ವಿದ್ಯುತ್ ಎಂದು ಮೆಸ್ಕಾಂ ಹೇಳುತ್ತಿದ್ದರೂ ಗ್ರಾಹಕರಿಗೆ ಮಾತ್ರ ಒಂದು ಗಂಟೆಯೂ ಸರಿಯಾದ ಗುಣಮಟ್ಟದ ವಿದ್ಯುತ್ ಸರಬರಾಜು ಆಗುತ್ತಿರಲಿಲ್ಲ.

Also Read  ಈ 8 ರಾಶಿಯವರಿಗೆ ಮದುವೆ ಯೋಗ ವ್ಯಾಪಾರ ದಾಂಪತ್ಯದಲ್ಲಿ ಹೊಂದಾಣಿಕೆ ಯಾವುದೇ ಸಮಸ್ಯೆಗಳಿದ್ದರೂ ಶಾಶ್ವತ ಪರಿಹಾರ ಪಡೆದುಕೊಳ್ಳಿ

ಪ್ರಸ್ತುತ ಈ ಎಲ್ಲ ಸಮಸ್ಯೆಗಳಿಂದ ಮೆಸ್ಕಾಂ ಮುಕ್ತವಾಗಿದೆ, ಮೊದಲನೆಯದಾಗಿ ಪುತ್ತೂರಿನಿಂದ ಹೊರಡುವ ಏಕ ಮಾರ್ಗಗಳು ಇದೀಗ ದ್ವೀ ಮಾರ್ಗಗಳಾಗಿ ಪರಿವರ್ತನೆಗೊಂಡಿದೆ,
ಬಿಂದು-ಸವಣೂರು-ನೆಲ್ಯಾಡಿಗೆ ಒಂದು ಮಾರ್ಗವಾದರೆ, ಕಡಬ-ಸುಬ್ರಹ್ಮಣ್ಯ ವಿದ್ಯುತ್ ಮಾರ್ಗಗಳಾಗಿ ಪರಿವರ್ತನೆಗೊಂಡಿದೆ, ಅದರಲ್ಲೂ ಮುಖ್ಯವಾಗಿ ಕಡಬಕ್ಕೆ 12.5 ಮೆಗಾವ್ಯಾಟ್ ವಿದ್ಯುತ್ ಪರಿವರ್ತಕವನ್ನು ಅಳವಡಿಸಿರುವುದೇ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ಕಾಣುವಂತಾಗಿದೆ, ಈ ಹಿಂದೆ ಕಡಬದಲ್ಲಿ 5 ಮೆಗಾವ್ಯಾಟ್‍ನ ಎರಡು ಪರಿವರ್ತಕಗಳಿದ್ದರೆ ಇದೀಗ ಒಟ್ಟು 22.5 ಮೆಗಾವ್ಯಾಟ್ ಸಾಮರ್ಥ್ಯವಿದೆ.

ಈ ಹಿಂದೆ ಹಳೆ ತಂತಿಗಳ ಸಮಸ್ಯೆ ದೊಡ್ಡದಾಗಿತ್ತು, ಆದರೆ ಇದೀಗ ಮೆಸ್ಕಾಂ ಮಾಹಿತಿ ಪ್ರಕಾರ ಸುಮಾರು 80 ವಿದ್ಯುತ್ ಪರಿವರ್ತಕಗಳ ಹಳೆ ತಂತಿಗಳನ್ನು ಬದಲಾಯಿಸಿ ಹೊಸ ತಂತಿಗಳನ್ನು ಅಳವಡಿಸಲಾಗಿದೆ. 8 ಕೋಟಿ ರೂಪಾಯಿಯ ಹಳೆ ತಂತಿ ಬದಲಾವಣೆ ಯೋಜನೆಯು ಟೆಂಡರ್ ಹಂತದಲ್ಲಿದೆ. ಅಲ್ಲದೆ ಇನ್ನಿತರ ಹಲವಾರು ವಿದ್ಯುತ್ ಮಾರ್ಗಗಳ ತಂತಿ ಬದಲಾವಣೆ ಕಾರ್ಯಕ್ಕೆ ಯೋಜನೆ ರೂಪಿಸಲಾಗಿದೆ.

Also Read  ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ ಪ್ರಾಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ರವರಿಂದ ದಿನ ಭವಿಷ್ಯ ಮಾಹಿತಿ

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎ.ಇ. ಸಜಿಕುಮಾರ್ ಅವರು, ಮೇಲಾಧಿಕಾರಿಗಳ ಸಹಕಾರ ಕ್ಷೇತ್ರದ ಶಾಸಕರ ಸಹಕಾರದಿಂದ ಕಡಬ ಸಬ್ ಡಿವಿಷನ್ ನನ್ನು ಸಮಸ್ಯೆ ಮುಕ್ತವಾಗಿಸುವಲ್ಲಿ ಸಫಲರಾಗಿದ್ದೇವೆ. ಇನ್ನು ಮುಂದೆ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಬದ್ದರಾಗಿದ್ದೇವೆ ಎಂದು ಅವರು ಹೇಳಿದ್ದಾರೆ.

error: Content is protected !!
Scroll to Top